Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 15 July 2024

ನಿಷೇದಿತ ಅವಧಿಯಲ್ಲಿ ಅನಧಿಕೃತವಾಗಿ ಅರಣ್ಯ ಜಲಪಾತ ವೀಕಗಷಣೆ ಇಬ್ಬರು ಯುವಕರ‌ ಬಂಧನ

ಯಲ್ಲಾಪುರ ; ನಿಷೇದಿತ ಅವಧಿಯಲ್ಲಿ ಅನಧಿಕೃತವಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವೇಶಿಸಿದ್ದ ಇಬ್ಬರು ಯುವಕರನ್ನು ಇಡಗುಂದಿ‌ ವಲಯ ಅರ್ಯಾಧಿಕಾರಿಗಳು ಬಂಧಿಸಿ‌ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
  ಹುಬ್ಬಳ್ಳಿಯ ಶ್ರೀಧರ ಈರಣ್ಣ ಪೂಜಾರ(32) ಹಾಗೂ ವಿನಾಯಕ ಶರಣಪ್ಪ ನಾಗರಾಳ(28) ಬಂಧಿತರಾಗಿದ್ದು, ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷ ಭಾನು ಜಿ ಪಿ ರವರ ನಿರ್ದೇಶನದಂತೆ, ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್ ಮಾರ್ಗದರ್ಶನದಲ್ಲಿ ಹಾಗೂ ಇಡಗುಂದಿ ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಶಿಲ್ಪಾ ಎಸ್ ನಾಯ್ಕ ರವರ ನೇತೃತ್ವದಲ್ಲಿ ನಿಯಮ ಮೀರಿದ್ದ ಪ್ರವಾಸಿಗರನ್ನು ಬಂಧಿಸಿ  ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
  ಇಡಗುಂದಿ ವಲಯದ ಇಡುಗುಂದಿ ಶಾಖಾ ವ್ಯಾಪ್ತಿಯ ಮಾಗೋಡು ಗ್ರಾಮದಲ್ಲಿ ಬರುವ ಕುಳಿಮಾಗೋಡು ಜಲಪಾತಕ್ಕೆ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು ಪ್ರವಾಸಿಗರ ಜೀವಕ್ಕೆ ಹಾನಿಯಾಗುವ ಸಂಭವವಿರುವುದರಿಂದ ಈ ಜಲಪಾತಕ್ಕೆ ಅರಣ್ಯ ಇಲಾಖೆ ಪ್ರವೇಶವನ್ನು ನಿರ್ಬಂಧಿಸಿತ್ತು. ಅದನ್ನು ಮೀರಿ ಶ್ರೀಧರ ಪೂಜಾರ ಹಾಗೂ ವಿನಾಯಕ ನಾಗರಾಳ ಕರ್ನಾಟಕ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ, ಅನಧಿಕೃತವಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವೇಶಿಸಿದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
   ಈ ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಗುರುಪ್ರಸಾದ ಕೆ, ಗಸ್ತು ವನಪಾಲಕರಾದ ಕಾಶಿನಾಥ ಯಂಕಂಚಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿದ್ದರು. 

ಅರಣ್ಯ ಇಲಾಖೆ ಪ್ರಕಟಣೆ 
   ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿರುವ ಕಾರಣ ಕುಳಿಮಾಗೋಡ ಜಲಪಾತ, ಶಿರಲೆ ಜಲಪಾತ ಹಾಗೂ ಕಾನೂರು ಜಲಪಾತ ವೀಕ್ಷಣೆಗೆ ನಿರ್ಬಂಧಿಸಲಾಗಿದೆ, ಈ ನಿರ್ಬಂಧ ಮೀರಿದವರ ವಿರುದ್ಧ ಅರಣ್ಯ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳುವುದು ಎಂದು ಇಡಗುಂದಿ ವಲಯ ಅರಣ್ಯ ಅಧಿಕಾರಿ ಶಿಲ್ಪಾ ಎಸ್ ನಾಯ್ಕ ತಿಳಿಸಿದ್ದಾರೆ.