ಯಲ್ಲಾಪುರ : ಯಲ್ಲಾಪುರ ಪವರ್ ಸ್ಟೇಷನ್ ನಲ್ಲಿರುವ ಒಂದು ರಿಲೆ(ಎಲೆಕ್ಟ್ರಿಕಲ್ ಸ್ವಿಚ್ಛ್) ಯನ್ನು ದುರಸ್ತಿ ಮಾಡಲಾಗುತ್ತದೆ ಕಳೆದ ಹಲವು ದಿನಗಳಿಂದ ಜನರಿಗೆ ತೊಂದರೆ ನೀಡುತ್ತಿರುವ ಯಲ್ಲಾಪುರದ ಹೆಸ್ಕಾಂ ವಿಭಾಗದ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿರವತ್ತಿಯಿಂದ ಯಲ್ಲಾಪುರ ಪವರ್ ಸ್ಟೇಷನ್ ಗೆ 33 ಕೆ ವಿ ವಿದ್ಯುತ್ ಪೂರೈಕೆಯಾಗುತ್ತಿದೆ, ಯಲ್ಲಾಪುರ ಪವರ್ ಸ್ಟೇಷನ್ ನಿಂದ 11 ಕೆ ವಿ ಯ ವಿದ್ಯುತ್ ತಾಲೂಕಿನ ಪಟ್ಟಣ, ಗ್ರಾಮೀಣ ಭಾಗಕ್ಕೂ ಪೂರೈಕೆಯಾಗುತ್ತಿದೆ. ಅಲ್ಲಿಯ ಟ್ರಾನ್ಸ್ಫಾರ್ಮರ್ ಗಳು 11 ಕೆ ವಿ ಯನ್ನು 230 ವೋಲ್ಟ್ ಆಗಿ ಪರಿವರ್ತಿಸಿ ಮನೆಗೆ ಅಥವಾ ಇನ್ನಿತರ ಉದ್ಯಮಗಳಿಗೆ 2 ಫೇಸ್ ಅಥವಾ 3 ಫೇಸ್ ಆಗಿ ಪೂರೈಸುತ್ತದೆ.
ಯಲ್ಲಾಪುರದಲ್ಲಿ ಕಾರ್ಯನಿರ್ವಹಿಸುವ ಕೆಳಹಂತದ ಸಿಬ್ಬಂದಿಗಳು ತಮ್ಮ ಜೀವವನ್ನು ಅಡವಿಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ, ಎಲೇಕ್ಟ್ರಿಕಲ್ ಬಿಇ ಡಿಪ್ಲೋಮಾ ಪದವಿ ಹೊಂದಿದ ಅಧಿಕಾರಿಗಳು ಮಾತ್ರ ಟೇಬಲ್ ಕುರ್ಚಿ ಬಿಟ್ಟು ಅಲುಗಾಡುತ್ತಿಲ್ಲ. ಯಲ್ಲಾಪುರ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ಪವರ್ ಸ್ಟೇಷನ್ ನಲ್ಲಿ ಒಂದು ರಿಲೇ(ಆಟೋಮೇಟಿಕ್ ಎಳೆಕ್ಟ್ರಿಕಲ್ ಸ್ವಿಚ್) ಸಮಸ್ಯೆಯಿಂದ ತೀವ್ರ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದಕ್ಕೆ ಕಾರಣ ಗಾಳಿ ಮಳೆ ಎಂದು ಸಬೂಬಿ ಹೇಳಿ ಜನರನ್ನು ಮರಳು ಮಾಡಲಾಗುತ್ತಿದೆ.
ಇದುವರೆಗೂ ಮಳೆ ಗಾಳಿಯಿಂದ ಬಿದ್ದ ಮರ ಟೊಂಗೆಗಳಿಂದ ವಿದ್ಯುತ್ ವ್ಯತ್ಯಯವಾಗುತ್ತಿತ್ತು ಎಂದು ಎಣಿಸಲಾಗಿತ್ತು, ಹಾಗೆ ವಿದ್ಯುತ್ ವ್ಯತ್ಯಯವಾದಾಗ ಕೆಳಹಂತದ ಹೆಸ್ಕಾಂ ಕೆಲಸಗಾರರು ಅತಿ ಶೀಘ್ರವಾಗಿ ದುರಸ್ತಿ ಮಾಡಿ ವಿದ್ಯುತ್ ಪೂರೈಸುವ ಕೆಲಸವನ್ನು ಮಾಡುತ್ತಿದ್ದರು. ಆದರೇ, ಇದೀಗ ಯಲ್ಲಾಪುರ ಪವರ್ ಸ್ಟೇಷನ್ನಲ್ಲಿ ಸಮಸ್ಯೆಯಾಗಿದ್ದು, ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ ಹಾಗೂ ಇದುವರೆಗೂ ತೆಗೆದುಕೊಳ್ಳದ ಮುಂಜಾಗ್ರತೆಗೆ ಕಾರಣವಾಗಿದೆ ಎನ್ನಲಾಗಿದೆ.
ಈ ಬಾರಿ ಯಲ್ಲಾಪುರದಲ್ಲಿ ಅತ್ಯಂತ ಹೆಚ್ಚು ಮಳೆಯಾಗಿಲ್ಲ ವಾಡಿಕೆಯಷ್ಟೇ ಮಳೆ ಹೆಚ್ಚು ಕಡಿಮೆ ಸುರಿದಿದೆ. ಗಾಳಿಯ ಪ್ರಮಾಣವು ಕಡಿಮೆಯಾಗಿದ್ದು, ಎರಡು ಮೂರು ದಿನಗಳಿಂದ ಗಾಳಿ ಬೀಸುತ್ತಿದೆ. ಹೀಗಾಗಿ ಯಾವುದೇ ಅವಘಡಗಳು ವಿದ್ಯುತ್ ತಂತೀಯ ಮೇಲೆ ಕಂಬದ ಮೇಲೆ ಸಂಭವಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಅದರಲ್ಲಿಯೂ ಕಿರುವತ್ತಿಯಿಂದ ಯಲ್ಲಾಪುರ ಸ್ಟೇಷನ್ ಗೆ ಪೂರೈಕೆ ಆಗುವ 33 ಕೆವಿ ವಿದ್ಯುತ್ ಪೂರೈಕೆ ಮಾರ್ಗ ಗಳ ಅಕ್ಕ ಪಕ್ಕದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಖಾಸಗಿ ಯವರಿಗೂ ಸಹಿತ ಯಾವುದೇ ಮರ ಅಥವಾ ಇತರೆ ಗಿಡಗಳನ್ನು ಬೆಳೆಸುವ ಅಧಿಕಾರ ಇಲ್ಲ ಮುಂಜಾಗ್ರತೆ ವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ ವಹಿಸಿ ತಮ್ಮದೇ ಸಿಬ್ಬಂದಿಗಳಿಗೆ ಮಳೆಗಾಲದಲ್ಲಿ ಹೆಚ್ಚುವರಿ ಕೆಲಸ ನೀಡುತ್ತಿದ್ದಾರೆ ಎನ್ನುವ ಆರೋಪ ಇದೆ.
ಇದೀಗ ಎಲ್ಲಾಪುರ ಸ್ಟೇಷನ್ನಲ್ಲಿ ಸ್ವಿಚ್ ತೊಂದರೆಯಾಗಿದ್ದು ಅದನ್ನು ದುರಸ್ತಿ ಮಾಡಬೇಕಾಗಿದ್ದ ಬಿಇ ಮತ್ತು ಡಿಪ್ಲೋಮಾ ಹೋಲ್ಡರ್ ಎಲೆಕ್ಟ್ರಿಕಲ್ ಇಂಜಿನಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಮೇ ತಿಂಗಳಲ್ಲಿ ಹೆಸ್ಕಾಂ ಇಲಾಖೆಗೆ ಸೂಚನೆ ನೀಡಿದ್ದ ಅರಣ್ಯ ಇಲಾಖೆ
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿ.ಪಂ ರಸ್ತೆಗಳು ಸೇರಿದಂತೆ ಹೆಸ್ಕಾಂ ವಿದ್ಯುತ್ ಲೈನ್ ಗಳಿಗೆ ಸಂಬಂಧಿಸಿದಂತೆ ಯಲ್ಲಾಪುರದ ಅರಣ್ಯ ಇಲಾಖೆ ಉಪ ವಿಭಾಗದವರು ಈಗಾಗಲೇ ಸಮಸ್ಯೆ ಸಂಭವಿಸಬಹುದಾದ ಮರಗಳ ಕಟಾವಿಗೆ ಮಾಹಿತಿ ಕೇಳಿ ನಿರ್ದೇಶನ ನೀಡಿದ್ದರು. ಅದು ಕೂಡ ಮೇ ತಿಂಗಳಲ್ಲಿ, ವಿದ್ಯುತ್ ತಂತಿ ಮೇಲೆ ಬೀಳಬಹುದಾದ ಮರಗಳು ಟೊಂಗೆಗಳು, ರಾಷ್ಟ್ರೀಯ ಹೆದ್ದಾರಿಗೆ, ರಾಜ್ಯ ಹೆದ್ದಾರಿಗೆ, ಜಿಲ್ಲಾ ಪಂಚಾಯತ್ ರಸ್ತೆಗಳಿಗೆ ಗ್ರಾಮೀಣ ರಸ್ತೆಗಳಿಗೆ ಅಡಚಣೆಯಾಗುವ ಮರಗಳ ಕುರಿತು ಮಾಹಿತಿ ಕೇಳಿ ಅವುಗಳ ಕಟಾವು ಬಗ್ಗೆ ಕೂಡ ಅರಣ್ಯ ಇಲಾಖೆ ಸಂಬಂಧಿಸಿದ ಪ್ರತಿ ಇಲಾಖೆಗೂ ಮುಂಜಾಗ್ರತೆ ವಹಿಸುವಂತೆ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕಟಿಂಗ್ ಮಾಡುವಂತೆ ಸೂಚಿಸಿದ್ದರೂ ಕೂಡ ಯಾವುದೇ ಇಲಾಖೆಗಳು ಸ್ಪಂದಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಸಾರ್ವಜನಿಕರಿಗೆ ತಲೆ ನೋವಾಗಿದೆ.
ಅಧಿಕಾರಿಗಳ ನಿರ್ಲಕ್ಷಕ್ಕೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಒಬ್ಬನ ಮೇಲೆ ಮರ ಬಿದ್ದು ಗಾಯಗೊಂಡಿದ್ದರೆ ಬುಧವಾರ ಮಂಚಿಕೇರಿ ಬಳಿ ಬರುವ ವ್ಯಕ್ತಿ ಸಾವನಪ್ಪಿದ್ದಾನೆ.