ಯಲ್ಲಾಪುರ : ಭವ್ಯ ಭಾರತದ ಮುಂದಿನ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವದೊಂದಿಗೆ ಆಡಳಿತ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶದಿಂದ ಮದರ ತೇರೆಸಾ ಶಾಲೆಯಲ್ಲಿ ಜುಲೈ4ರಂದು ಮಕ್ಕಳ ಶಿಕ್ಷಕರ ಅನುಮೋದನೆಯ ಮೂಲಕ ಶಾಲಾ ಸಂಸತ್ತು ಸ್ಥಾಪಿಸಲಾಯಿತು.
ಶಾಲಾ ಮುಖ್ಯೋಪಾದ್ಯಾಯರಾದ ಫಾ. ರೋಯಸ್ಟನ ಗೊನ್ಸಾಲ್ವಿಸ್ ರವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶಾಲಾ ಪ್ರಧಾನಮಂತ್ರಿಯಾಗಿ ಸಿಲ್ವನ ಡಿಕೊಸ್ತಾ, ಶಾಲಾ ಉಪಮಂತ್ರಿಯಾಗಿ ನಾಗಶ್ರೀ, ಕ್ರೀಡಾ ಮಂತ್ರಿಯಾಗಿ ಸಾಧಿಕ್ ಮತ್ತು ಇಂಚರಾ, ಸಾಂಸ್ಕೃತಿಕ ಮಂತ್ರಿಯಾಗಿ ಕುಸುಮ್ ಪಟೇಲ್ ಮತ್ತು ಶ್ರಾವಣಿ ಆಚಾರಿ, ಶಿಸ್ತು ಮಂತ್ರಿಯಾಗಿ ಅಂಕಿತಾ ಮತ್ತು ಶರೀನ್, ಸ್ವಚ್ಛತಾ ಮಂತ್ರಿಯಾಗಿ ಅಫಾನ್ ಮತ್ತು ಫಿರದೋಜ್ ಹಾಗೂ ಆರೋಗ್ಯಮಂತ್ರಿಯಾಗಿ ಸ್ವಾತಿ ಮತ್ತು ಶ್ರೀರಾಮ್ ಆಯ್ಕೆಮಾಡಲಾಯಿತು.
ಆಯ್ಕೆ ಪ್ರಕ್ರಿಯೆ ನಂತರ ಫಾ.ರೊಯಸ್ಟನ ಗೊನ್ಸಾಲ್ವಿಸ್ ರವರು ನಾಯಕತ್ವದ ಮಹತ್ವ ಮತ್ತು ಸೇವಾ ಮನೋಭಾವನೆ ಹೇಗೆ ರೂಡಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ವಿಚಾರಗಳು ಉಡುಗೆ ತೊಡುಗೆಗಳನ್ನು ಪ್ರಸ್ತುತ ಪಡಿಸುವ ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಏರ್ಪಡಿಸಲಾಗಿತ್ತು.
ಆಯ್ಕೆಯಾದ ಶಾಲಾ ಮಂತ್ರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು ಎಲ್ಲಾ ಶಾಲಾ ಶಿಕ್ಷಕ ವೃಂದದರು ಉಪಸ್ಥಿತರಿದ್ದರು.