ಯಲ್ಲಾಪುರ ; ಪಟ್ಟಣ ವ್ಯಾಪ್ತಿಯ ಶಿರಸಿ ರಸ್ತೆಯ ಶಂಕರ ಭಟ್ ತಾರೀಮಕ್ಕಿ ಅವರ ಮನೆಯ ಎದುರು ಬೃಹತ್ ಗಾತ್ರದ ಜಂಬೆ ಮರ ಒಂದು ವಿದ್ಯುತ್ ತಂತಿ ಹಾಗೂ ರಸ್ತೆಯ ಮೇಲೆ ಉರುಳಿ ಬಿದ್ದಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ತಂತಿಯ ಮೇಲೆ ಜೋತು ಬಿದ್ದಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಣ್ಣು ಕೆಸರಾಗಿ ಮಾರ್ಪಟ್ಟಿದೆ ಹೀಗಾಗಿ ಬೇರುಗಳನ್ನು ಗಟ್ಟಿಗೊಳಿಸದೆ ತಾಲೂಕಿನ ವಿವಿಧ ಭಾಗಗಳಲ್ಲಿ ಮರಗಳು ಬುಡ ಸಮೇತ ಕಿತ್ತು ಬಿಳುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲೂ ಹಲವು ಕಡೆ ಮರಗಳು ಕಿತ್ತು ಬಿದ್ದಿರುವ ವರದಿಯಾಗಿದೆ.