ಯಲ್ಲಾಪುರ ; ಮನುಷ್ಯನ ಆರೋಗ್ಯಕ್ಕೆ ಏನು ಅವಶ್ಯಕತೆಯಿದೆ ಹಾಗೆಯೇ ಒಂದು ಕಾಲೇಜಿಗೆ ನ್ಯಾಕ್‌ಮಾನ್ಯತೆ ಅವಶ್ಯಕವಾಗಿದೆ. 21 ನೇ ಶತಮಾನದಲ್ಲಿಯೂ ನಾವು ನ್ಯಾಕ್ ಮಾನ್ಯತೆ ಪಡೆಯಲಾಗಲಿಲ್ಲ ಎನ್ನುವುದಕ್ಕೆ ಏನೋ ಕೊರತೆಯಾಗಿದೆ, ನ್ಯಾಕ್‌ಮಾನ್ಯತೆ ಸಿಕ್ಕರೆ ಕಾಲೇಜಿಗೆ ಅನುಕೂಲವಾಗಲಿದೆ. ಈ ಮನ್ಯತೆ ಪಡೆಯಲು ಎಲ್ಲರು ಸೇರಿ ಪ್ರಯತ್ನಿಸುವ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು, ಶನಿವಾರ ಬೆಳಿಗ್ಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ 'ಕಾಲೇಜು ವಾರ್ಷಿಕೋತ್ಸವದ' ಕಾರ್ಯಕ್ರಮ(ವ್ಯಾಲಿಡೆಕ್ಟರಿ) ಕಾರ್ಯಕ್ರಮ ಉದ್ಘಾಟಿಸಿ, ಪ್ರಾಂಶುಪಾಲರ ಕೊಠಡಿ ಸ್ಟಾಪ್ ರೂಮ್ ಉದ್ಘಾಟಿಸಿ ಮಾತನಾಡಿದರು. ಮುಂಡಗೋಡ ಪದವಿ ಕಾಲೇಜಿಗೆ ನ್ಯಾಕ್ ಮಾನ್ಯತೆ ಸಿಕ್ಕು ನಾಲ್ಕು ವರ್ಷವಾಯಿತು. ನಮ್ಮ ಈ ಕಾಲೇಜಿಗೆ ಯಾಕೇ ಸಿಕ್ಕಿಲ್ಲ ಎನ್ನುವುದನ್ನು ಗಮನ ಹರಿಸಬೇಕಾಗಿದೆ. ಹಿಂದೆ ಏನಾಯಿತು ಆಯಿತು. ಮುಂದೆ ಎನಾಗಬೇಕು ಅದು ಆಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ತಾತ್ಕಾಲಿಕ ಆಮೀಶಕ್ಕೆ ಬಲಿಯಾಗಬಾರದು. ಮುಂದಿನ ಭವಿಷ್ಯಕ್ಕಾಗಿ ಸಿದ್ದವಾಗಬೇಕಾದ ವಯಸ್ಸು ನಿಮ್ಮದು. ಈ ದೇಶದ ಸರ್ಕಾರ ರಚನೆ ಮಾಡುವ ಅಧಿಕಾರ ಹೊಂದದವರು ನೀವು. ಈ ದೇಶಕ್ಕೆ ಯುವ ಜನತೆಯೇ ಸಂಪತ್ತು. ಈ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ನಡುವಳಿಕೆ ಉಳ್ಳವರು ಎನ್ನುವ ಸಂದೇಶವನ್ನು ಸಮಾಜಕ್ಕೆ ಕಳಿಸುವ ವಿದ್ಯಾರ್ಥಿಗಳಾಗಿ, ಉತ್ತಮ ವಿದ್ಯಾರ್ಥಿಗಳನ್ನು ಸಿದ್ದಪಡಿಸುವ ಜವಾಬ್ದಾರಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮೇಲಿದೆ. ವಿಶ್ವದ ಯಾವುದೇ ಭಾಗದಲ್ಲಿಯೂ ನಿಮ್ಮ ನಡತೆ ಸರಿಯಿದ್ದರೇ ನೀವು ಗೆಲ್ಲುತ್ತಿರಿ. ನಮ್ಮ ಕಾಲೇಜಿನಲ್ಲಿ ಓದಿ ಒಳ್ಳೆಯ ಸ್ಥಾನಮಾನವನ್ನು ಹೊಂದುವಂತವರಾಗಿ. ಸೋಲಿಗೆ ಹತಾಶರಾಗದೇ, ಸೋಲನ್ನು ಆತ್ಮವಿಶ್ವಾಸದಿಂದ ಗೆಲ್ಲುವಂತಾರಾಗಿ ಎಂದು ಶಿವರಾಮ ಹೆಬ್ಬಾರ್ ಹಾರೈಸಿದರು.
ಸಂಗೀತ ಕಲಾವಿದ ಪ್ರಸನ್ನ ವೈದ್ಯ ಹೆಗ್ಗಾರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಿಕ್ಷಣ ಎಂದರೆ ನಮ್ಮ ಗುಣಮತ್ತೆ ಎಂದು ಹಿರಿಯರು ಹೇಳಿದ್ದಾರೆ. ಯಾವುದೇ ಐಚ್ಚಿಕ ಆಸಕ್ತಿಯನ್ನು ಬೆಳೆಸಲು ಶಿಕ್ಷಣ ಬಹಳ ಮಹತ್ತರ ಪಾತ್ರವಹಿಸುತ್ತದೆ. ಶಾಲಾ ಕಾಲೇಜಿನ ಓದುವ ಅವಧಿಯಲ್ಲಿಯಷ್ಟೆ ಅಲ್ಲದೇ ಇತರೇ ದಿನಗಳಲ್ಲಿಯೂ ಶಿಕ್ಷಕ ಹಾಗೂ ಶಿಶ್ಯನ ಮಧ್ಯ ಸಂಬಂಧಗಳು ಮುಂದುವರೆಯಬೇಕು ಎಂದು ಹೇಳಿದ ಅವರು, ಶಿಕ್ಷಣಕ್ಕೆ ಸಂಬಂಧಿದಂತೆ ಒಂದು ಹಾಡನ್ನು ಹಾಡಿದರು.
ಪ್ರಾಂಶುಪಾಲರಾದ ಡಾ. ಆರ್ ಡಿ ಜನಾರ್ಧನ್ ಅಧ್ಯಕ್ಷತೆವಹಿಸಿ, ಪ್ರಾಸ್ತಾವಿಕ ಮಾತನಾಡಿ, ಎಲ್ಲರಲ್ಲೂ ಒಂದೆ ರೀತಿಯ ಪ್ರತಿಭೆ ಇರುವುದಿಲ್ಲ. ಯಾವ ವಿದ್ಯಾರ್ಥಿಗೆ ಯಾವುದರಲ್ಲಿ ಪರಿಣಿತಿ ಇದೆ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಕೌಶಲ್ಯಕ್ಕೆ ತಕ್ಕಂತೆ ವೇದಿಕೆ ಕಲ್ಪಿಸಬೇಕು. ನಮ್ಮ ಹಾಗೇ ನಮ್ಮ ವಿದ್ಯಾರ್ಥಿಗಳು ಇರಬೇಕು ಎನ್ನುವುದು ಸರಿಯಾದುದಲ್ಲ. ಮನುಷ್ಯ ಮೌಲ್ಯಗಳನ್ನು ಮೊದಲು ಕಲಿತುಕೊಳ್ಅಲುಮ್ನಿ
ನಮ್ಮ ಕಾಲೇಜಿನಲ್ಲಿ ಸ್ಟಾಪ್ ರೂಮ್ ಹಾಗೂ ಪ್ರಾಂಶುಪಾಲರ ಕೊಠಡಿಯನ್ನು ಪ್ರತ್ಯೇಕಿಸಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಉಪನ್ಯಾಸಕರ ಜೊತೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನಮ್ಮ ಕಾಲೇಜಿಗೆ ತಾತ್ಕಾಲಿಕ ಅಫಿಲೇಷನ್ ಸಿಕ್ಕಿದೆ, ಖಾಯಂ ಅಫಿಲೇಷನ್ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೆವೆ. ನ್ಯಾಕ್ ಮಾನ್ಯತೆ ಕೊಡಿಸುವ ಪ್ರಯತ್ನ ಮಾಡುತ್ತೆವೆ ಎಂದು ಹೇಳಿದರು.
ಕಳೆದ ವರ್ಷದ ಪ್ಲೇಸಮೆಂಟ್ ನಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಂಡಿದ್ದಾರೆ. ಪದವಿಯೊಂದಿಗೆ ಪೂರಕ ಕೋರ್ಸ್ ಗಳನ್ನು ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತದೆ. ಅಲುಮ್ನಿ ಅಸೋಸಿಯೇಷನ್(ಹಳೆಯ ವಿದ್ಯಾರ್ಥಿಗಳು) ಇದುವರೆಗೆ ಸ್ತಾಪಿಸಲಾಗಿಲ್ಲ. ಇನ್ನೂ ಮುಂದೆ ಅಲುಮ್ನಿ ಅಸೋಸಿಯೇಷನ್ ನೋಂದಣಿ ಮಾಡಬೇಕಾಗಿದೆ. ತನ್ಮೂಲಕ ಕಾಲೇಜನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಚಿಂತನೆ ನಡೆದಿದೆ ಎಂದರು.