Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Thursday, 18 July 2024

ಯಲ್ಲಾಪುರ ಮಾಗೋಡದಲ್ಲಿ ವೃದ್ದನ ಆತ್ಮಹತ್ಯೆ/ ಮಳೆಯಿಂದ ಬಾವಿ ಹಾಗೂ ಮೇಲ್ಚಾವಣಿ ಕುಸಿತ

ಭಾವಿಯ ಪಕ್ಕದಲ್ಲಿಯೇ ಹರಿಯುವ ನೀರಿನ ಕಾಲುವೆ ಇರುವುದರಿಂದ ಬಾವಿ ಕುಸಿದಿದೆ ಎಂದು ಹೇಳಲಾಗುತ್ತಿದೆ. ಬಾವಿಯ ಮೇಲೆ ಇರುವ ಮೇಲ್ಚಾವಣಿ ಕುಸಿದು ಬಿದ್ದಿದ್ದು ಹಂಚುಗಳು ನೀರಿನಲ್ಲಿ ಮುಳುಗಿವೆ. 
   ಹೊಳೆಮಡು, ಮಾಗೋಡು ನಿವಾಸಿ ಕೇಶವ ಗೋಪಾಲಕೃಷ್ಣ ಭಾಗ್ವತ(87) ಈತ ತಮ್ಮ ಪಕ್ಕದ ತೋಟದ ಮಾಲಿಕರಾದ ಗೋಪಾಲ ಕೃಷ್ಣ ಭಟ್ ಸಾಹುಂಕಿಮನೆ, ದೇವರುಗುಡ್ಡ ಇವರ ಜಾಗದಲ್ಲಿರುವ ಒಂದು ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿಕೊಂಡು ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಯಲ್ಲಾಪುರ ಮಾಗೋಡದಲ್ಲಿ ವೃದ್ದನ ಆತ್ಮಹತ್ಯೆ

ಯಲ್ಲಾಪುರ ; ಯಾವುದೋ ವಿಷಯವನ್ನ ಮನಸ್ಸಿಗೆ ಹಚ್ಚಿಕೊಂಡು ವಯೋವೃದ್ಧ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ  ಮಾಗೋಡ ಸಾಹುಂಕಿಮನೆ ದೇವರುಗುಡ್ಡದಲ್ಲಿ ನಡೆದಿದೆ.
   ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ‌ ನಡೆಸಿದ್ದಾರೆ.

ಮಳೆಯಿಂದ ಬಾವಿ ಹಾಗೂ ಮೇಲ್ಚಾವಣಿ ಕುಸಿತ
ಯಲ್ಲಾಪುರ : ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಕುಂದೂರಿನಲ್ಲಿ‌ಕುಡಿಯುವ ನೀರಿನ ಬಾವಿ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದೆ.
  ಕುಂದೂರಿನ ಮಂಜುನಾಥ್ ರಾಮ ಮೊಗೇರ್ ಇವರ ಮನೆಯ ಕುಡಿಯುವ ನೀರಿನ ಬಾವಿಯಾಗಿದ್ದು, ಮಳೆ ರಭಸಕ್ಕೆ, ಬಾವಿಯೊಳಗಿನ ಪಂಪ ಸೆಟ್ ಕೂಡ ಮಣ್ಣಿನಲ್ಲಿ ಸೇರಿಕೊಂಡಿದೆ.