ಯಲ್ಲಾಪುರ : ತಾಲೂಕಿನ ತುಂಬೆಬೀಡಿನ ನಾಗೇಂದ್ರ ಉಮಾಮಹೇಶ್ವರ ಹೆಗಡೆ ಅವರ ಮನೆ ಅಂಗಳದಲ್ಲಿ ಚಿರತೆಯೊಂದು ಬುಧವಾರ ಮುಂಜಾನೆ 1.45 ಕ್ಕೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮನೆ ಅಂಗಳದಲ್ಲಿ ಇರುತ್ತಿದ್ದ ನಾಯಿಯನ್ನು ಹುಡುಕುತ್ತಾ ಬಂದ ಚಿರತೆ, ನಾಯಿಯನ್ನು ಪಂಜರದಲ್ಲಿ ನೋಡಿ ಎಳೆಯಲು ಹಲವು ಪ್ರಯತ್ನನಡೆಸಿದೆ. ನಾಯಿ ಗಾಢ ನಿದ್ದೆಯಲ್ಲಿ ಮಲಗಿತ್ತು. ಚಿರತೆ ಸಮೀಪ ಬಂದು ನಾಯಿಯನ್ನು ಮೂಸಿ ನೋಡಿದರೂ, ನಾಯಿ ಎಚ್ಚೆತ್ತುಕೊಳ್ಳಲಿಲ್ಲ. ಬೇಟೆ ತನ್ನ ಪಾಲಿಗೆ ಸಿಕ್ಕಿಲ್ಲ ಎಂದು ಅರಿತ ಚಿರತೆ ಮರಳಿ ಹೋಗುವ ಸಂದರ್ಭದಲ್ಲಿ ನಾಯಿ ಎದ್ದು ಬೊಗಳಿದೆ.
ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳು ಮನೆಯವರೆಗೂ ಬಂದು, ದನ ಕರುಗಳನ್ನ ತಿಂದು ಹಾಕಿದ ಘಟನೆಗಳು ಬಹಳಷ್ಟು ನಡೆದಿದೆ. ಇದೇ ರೀತಿ ಇಂದು ನಸೂಕು ಹರಿಯುವ ಮುನ್ನ ಕೂಡ ಚಿರತೆ, ಅಂಗಳದಲ್ಲಿ ಕಾಣಿಸಿಕೊಂಡು ಭಯಭೀತಿ ಮೂಡಿಸಿದ ಘಟನೆ ನಡೆದಿದೆ.