ಯಲ್ಲಾಪುರ ; ಕಳೆದ ಬುಧವಾರ ರಾಷ್ಟ್ರೀಯ ಹೆದ್ದಾರಿ ಅಂಕೋಲ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತವಾಗಿ ಹಲವಾರು ಜನ ಸಾವನ್ನಪ್ಪಿ ಇನ್ನೂ ಹಲವಾರು ಜನ ಕಾಣೆಯಾಗಿದ್ದರು. ಕಾಣೆಯಾದವರ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ಸೈನಿಕರ ನೆರವು ಪಡೆದಿದ್ದು, ಬೆಳಗಾವಿಯ ಮಿಲಿಟರಿ ಪೋರ್ಸ್‌ನ ಅರವತ್ತು ಜನ ಸೈನಿಕರು ಹಾಗೂ ಅಧಿಕಾರಿಗಳು ರವಿವಾರ ಮಧ್ಯಾಹ್ನ ಯಲ್ಲಾಪುರ ಮೂಲಕ ಶಿರೂರ್ ಗುಡ್ಡ ಕುಸಿತವಾದ ಸ್ಥಳಕ್ಕೆ ತೆರಳಿದರು.
60 ಜನ ಸೈನಿಕರು, ತೆರವು ಕಾರ್ಯಕ್ಕೆ ಅಗತ್ಯ ಇರುವ ಸಾಮಗ್ರಿಗಳೊಂದಿಗೆ ಒಟ್ಟು ಆರು ವಾಹನ ಎರಡು ಅಧಿಕಾರಿಗಳ ಚೀಪ್ ಳೊಂದಿಗೆ ತೆರಳಿದ್ದಾರೆ.