ಯಲ್ಲಾಪುರ ; ತಾಲೂಕಿನ ಕೋಳಿಕೇರಿ ಸಮೀಪದ ದೇಶಪಾಂಡೆ ನಗರ ಡೊಮಗೇರಿ ಹತ್ತಿರ ಬೃಹತ್ ಮರವೊಂದು ಯಲ್ಲಾಪುರಕ್ಕೆ ಪೂರೈಕೆಯಾಗುತ್ತಿರುವ ವಿದ್ಯುತ್ ಯಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿದೆ.
ಯಲ್ಲಾಪುರ ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ದುರಸ್ಥಿಕಾರ್ಯ ಕೈಗೊಂಡಿದ್ದು, ವಿದ್ಯುತ್ ಸಂಪರ್ಕಕ್ಕೆ ಬುಧವಾರ ಸಂಜೆ 4.00ಯವರೆಗೂ ಸಮಯ ತೆಗೆದುಕೊಳ್ಳಿದೆ ಎಂದು ಹೆಸ್ಕಾಂ ಕಚೇರಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.