ಯಲ್ಲಾಪುರ: ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಕೂಡ ಯಶಸ್ಸಿಗೆ ಮುಖ್ಯ ಎಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ ಹೇಳಿದರು.
ಅವರು ಸೋಮವಾರ ಅಡಿಕೆ ಭವನದಲ್ಲಿ ಗ್ರೀನ್‌ಕೇರ್ ಸಂಸ್ಥೆ ಮತ್ತು ಕ್ರಿಯೇಟಿವ್ ತರಬೇತಿ ಕೇಂದ್ರ ಆಯೋಜಿಸಿದ ಕೌಶಲ್ಯ ವಿಕಾಸ ಯೋಜನೆಯ ಉಚಿತ ಬ್ಯೂಟಿಶಿಯನ್ ಮತ್ತು ಬೆಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವರ್ತಮಾನದಲ್ಲಿ ಉದ್ಯೋಗಿಯಾಗಲು ಬೇಕಾದ ಕೌಶಲ್ಯಗಳನ್ನು ಸ್ವಪ್ರೇರಣೆಯಿಂದ ಪಡೆಯುವ ಅವಶ್ಯಕತೆ ಇದ್ದು, ಸ್ವಯಂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಈ ಯೋಜನೆ ಒದಗಿಸುತ್ತದೆ ಎಂದು ತಿಳಿಸಿದ ಜನಾರ್ಧನ, ಗ್ರೀನ್‌ಕೇರ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಗ್ರೀನ್ ಕೇರ್ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ ಮುಳೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಯಶಸ್ಸಿಗೆ ಉತ್ತಮ ಸೇವೆಯ ಮನೋಭಾವ ಮುಖ್ಯ, ಇದನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಅಸ್ಮಿತೆ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಮಾತನಾಡಿ, ಉದ್ಯಮಶೀಲತೆಗೆ ಬೇಕಾದ ಕೌಶಲ್ಯಗಳನ್ನು ಈ ತರಬೇತಿ ನೀಡುತ್ತದೆ ಎಂದು ತಿಳಿಸಿ, ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು.
ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್‌ಮಾತನಾಡಿ, 45 ದಿನಗಳ ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಗ್ರೀನ್‌ಕೇರ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ, ಪಟ್ಟಣ ಪಂಚಾಯತ್ ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ ಮಾತನಾಡಿದರು.
ವೇದಿಕೆಯಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ ಹೆಗಡೆ, ಗ್ರೀನ್‌ಕೇರ್ ಸಂಸ್ಥೆಯ ನಿರ್ದೇಶಕರಾದ ಸದಾಶಿವ ಶಿವಯ್ಯನಮಠ, ಗಜಾನನ ಭಟ್ಟ, ಉದಯ ನಾಯ್ಕ, ಉದಯ ಕುಮಾರ ಜಯಪ್ಪನವರ್, ಸಂಕಲ್ಪ ಸಮಗ್ರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಕುಮಾರ ಜಿ. ಪಟಗಾರ ಉಪಸ್ಥಿತರಿದ್ದರು.