ಯಲ್ಲಾಪುರ: ಆಸ್ತಿ ಮನೆ ವಿಷಯಕ್ಕೆ ಸಂಬಂಧಿಸಿದಂತೆ ಮೈದುನನಿಂದ ಅತ್ತಿಗೆಯ ಮೇಲೆ, ಹಲ್ಲೆ, ನಿಂದನೇ ಹಾಗೂ ಜೀವ ಬೇಧರಿಕೆ ಹಾಕಿರುವ ಘಟನೆ ಶುಕ್ರವಾರ ಪಟ್ಟಣದ ಶಾರದಾಗಲ್ಲಿಯಲ್ಲಿ ನಡೆದಿದೆ.
ಶಾರದಾಗಲ್ಲಿ ನಿವಾಸಿ ಪ್ರಶಾಂತ ನಾರಾಯಣ ಪಾಟಣಕರ (49) ತನ್ನ ಅತ್ತಿಗೆ ಮನೆಗೆ ತೆರಳಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾ ನಾರಾಯಣ ಗಡಕರ್ (40) ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಶಾಂತನು, ರೇಣುಕಾ ಗಡಕರ ಅವರ ಗಂಡನ ತಮ್ಮನಾಗಿದ್ದು, ಈ ಆಸ್ತಿ ವಿಷಯದಲ್ಲಿ ಹಿಂದಿನಿಂದಲೂ ತಂಟೆ ತಕರಾರು ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 03:30 ಗಂಟೆಗೆ. ರೇಣುಕಾ ಅವರು ತಮ್ಮ ಸಹೋದ್ಯೋಗಿ, ಹೆಲ್ತ್ ಇನ್ಸ್‌ಪೆಕ್ಟರ್ ಶ್ರದ್ದಾ ಮಂಜುನಾಥ ಹೆಗಡೆ ಅವರೊಂದಿಗೆ ಮನೆಯಲ್ಲಿ ಮಾತನಾಡುತ್ತಿದ್ದ ಸಂದರ್ಭ, ಪ್ರಶಾಂತನು ಅಪ್ರತೀಕ್ಷಿತವಾಗಿ ಪ್ರವೇಶಿಸಿ, "ನೀನು ಯಾಕೆ ಬಂದಿದ್ದೀಯಾ" ಎಂದು ಶ್ರದ್ದಾ ಅವರನ್ನು ಪ್ರಶ್ನಿಸಿದ್ದಾನೆ.
ರೇಣುಕಾ ಅವರು, "ನಮ್ಮ ಇಲಾಖೆಯವರು ನಮ್ಮ ಇಲಾಖೆಯ ಬಗ್ಗೆ ಮಾತನಾಡಲು ಬಂದಿದ್ದಾರೆ," ಎಂದು ತಿಳಿಸಿದಾಗ, ಪ್ರಶಾಂತನು ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಒಣಗಿಸಲು ಹಾಕಿದ ಬಟ್ಟೆಗಳನ್ನು ಎಳೆದು ಬಿಸಾಕಿ., ರೇಣುಕಾ ಅವರು "ಯಾಕೆ ಈ ರೀತಿ ಮಾಡುತ್ತಿದ್ದೀಯಾ" ಎಂದು ಪ್ರಶ್ನಿಸಿದಾಗ, ಪ್ರಶಾಂತನು ಮತ್ತಷ್ಟು ಅವಾಚ್ಯ ಶಬ್ದಗಳಿಂದ ಬೈದು, ರೇಣುಕಾ ಅವರ ಎಡ ಬುಜವನ್ನು ಹಿಡಿದು ಎಳೆದು, ಅವಮಾನಪಡಿಸಿದ್ದಾನೆ. ಗಾಬರಿಯಿಂದ ರೇಣುಕಾ ಅವರು ಕೂಗಾಡಿದಾಗ, ಪ್ರಶಾಂತ "ಇದು ನನ್ನ ಮನೆ. ನಿನಗೆ ಮತ್ತು ನಿನ್ನ ಗಂಡನಿಗೆ ಜೀವಂತ ಉಳಿಸುವುದಿಲ್ಲ" ಎಂದು ಜೀವ ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹೋಗಿದ್ದಾನೆ.
ಈ ಘಟನೆಯ ಕುರಿತು ರೇಣುಕಾ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಪ್ರಶಾಂತನ ವಿರುದ್ಧ ದೂರು ನೀಡಿದ್ದಾರೆ. ಪಿಐ ರಮೇಶ್ ಹಾನಾಪುರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.