ಯಲ್ಲಾಪುರ : ಯಲ್ಲಾಪುರ ನ್ಯೂಸ್ ವಿವಿಧ ವಿಭಾಗಗಳಲ್ಲಿ ನೂರಕ್ಕೆ ಹೆಚ್ಚು ವಾಟ್ಸಪ್ ಗ್ರೂಪ್ ಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಕೆಲವು ಗ್ರೂಪ್ ಗಳ ಇನ್ವಿಟೇಶನ್ ಲಿಂಕ್ ಗಳನ್ನು ಭಹಿರಂಗವಾಗಿ ನೀಡಲಾಗಿತ್ತು.(ಗ್ರೂಪ್ ಗಳಲ್ಲಿ) ಎಲ್ಲಿಂದಲೂ ಈ ಗ್ರೂಪ್ ಗಳ ಇನ್ವಿಟೇಷನ್ ಲಿಂಕ್ ಪಡೆದ ನೈಜೀರಿಯನ್ ಐ ಎಸ್ ಡಿ ಸಂಖ್ಯೆ ಬಳಸಿ ಸೇರಿಕೊಂಡ ಹುಳುಗಳು, ನಾವು ಎಲ್ಲಾ ಸುರಕ್ಷಿತ ವಿಧಾನವನ್ನು ಅಳವಡಿಸಿಕೊಂಡಿರುವ ಕಾರಣಕ್ಕಾಗಿ ಯಾವುದೇ ಬೇಳೆ ಬೇಯಿಸಿಕೊಳ್ಳಲಾಗದೆ ಹಿಂದೆ ಮರಳಿದ್ದಾರೆ(ಫೋಟೊ ನೋಡಬಹುದು) ಅಂದರೆ ಲೆಫ್ಟ್ ಆಗಿದ್ದಾರೆ.
ನಮ್ಮ ಓದುಗರ ಮಾಹಿತಿಗಾಗಿ +234xxxxxxxxxxxxx ಸಂಖ್ಯೆಯಿಂದ ಪ್ರಾರಂಭವಾಗುವ ಯಾವುದೇ ಸಂಖ್ಯೆಯ ಮೆಸೇಜ್ ಗಳನ್ನು ತೆರೆಯಬೇಡಿ. ಅವರು ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ ಓಪನ್ ಮಾಡಬೇಡಿ, ನಿಮ್ಮ ಫೋನ್ ಭದ್ರತಾ ವ್ಯವಸ್ಥೆ ಹೊಂದದೆ ಇದ್ದರೆ ಫೋನ್ ಹ್ಯಾಕ್ ಆಗುವ ಸಾಧ್ಯತೆಯಿದ್ದು, ಬ್ಯಾಂಕ್ ಖಾತೆ ಇನ್ನಿತರ ಡೇಟಾಗಳು ಹ್ಯಾಕರ್ ಕೈಸೆರಿ ನೀವು ವಂಚನೆಗೆ ಒಳಗಾಗಬಹುದಾಗಿದೆ.
ಯಾವುದೇ ರೀತಿಯ ಆಫರ್, ಗೇಮ್, ಗೇಮ್ ಪ್ರೆಡಿಕ್ಷನ್, ಫ್ರೀ ಆ‌್ಯಪ್ ಡೌನಲೋಡ್ ಲಿಂಕ್, ಮೋಡ್ ಆ‌್ಯಪ್ ಸ್ಟೋರ್, ಕ್ರಿಕೇಟ್ ಬೆಟ್ಟಿಂಗ್ ಆ‌್ಯಪ್ ಲಿಂಕ್(ಪ್ಲೇಸ್ಟೋರ್ ಹೊರತುಪಡಿಸಿ) ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಡಿ. ಇದರಿಂದಾಗಿ ನಿಮ್ಮಬ್ಯಾಂಕ್ ಖಾತೆಯ ಹಣದೊಂದಿಗೆ, ಸೋಶಿಯಲ್ ಮೀಡಿಯಾ ಪಾಸ್ವರ್ಡ್ ಹ್ಯಾಕ್ ಆಗುವ ಸಾಧ್ಯತೆಯಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೀವು ಇತರರೊಂದಿಗೆ ಹೊಂದಿರುವ ಫ್ರೆಂಡ್‌ಶಿಪ್ ಸಂಬಂಧಗಳು ಹಾಳಾಗಬಹುದಾಗಿದೆ. ಯಾವುದೇ ರೀತಿಯ QR code ಸ್ಕ್ಯಾನ್ ಮಾಡುವ ಪೂರ್ವದಲ್ಲಿ, ಎಸ್ಎಂಎಸ್ ಮೂಲಕ ಬಂದ ಓಟಿಪಿ ಬರ್ತಿ ಮಾಡುವ ಪೂರ್ವದಲ್ಲಿ ಹತ್ತಾರು ಬಾರಿ ಯೋಚಿಸಿ, ಸೋಶಿಯಲ್ ಮಿಡಿಯಾದಲ್ಲಿ ಗುರುತುಪರಿಚಯ ಇಲ್ಲದವರೊಂದಿಗೆ, ನಮ್ಮ ಸ್ಥಳೀಯ ಹೆಸರು ಫೋಟೊ ಬಳಸಿದವರೊಂದಿಗೆ ಸ್ನೇಹಿತರಾಗಬೇಡಿ, ಅವರು ಎಸೆದ ತುಣುಕಿನ ಗಾಳಕ್ಕೆ ಸಿಲುಕಿ ಬ್ಲಾಕ್ ಮೇಲ್ ಗೆ ಒಳಗಾಗಬೇಡಿ, ಎಲ್ಲಕ್ಕಿಂತ ಮುಖ್ಯವಾಗಿ ಆನಲೈನ್ ಲೋನ್ ಪಡೆದು ಎಷ್ಟೆ ಗಟ್ಟಿಗಾರಾದರೂ ಕೊನೆಯಲ್ಲಿ ಸೋಲುವಂತವರಾಗಬೇಡಿ.
ಯಾವುದೇ ಭಾರತೀಯ ಜೀನಿಯನ್ ಕಂಪನಿಗೆ ಹೋಲಬಹುದಾದಂತಹ ವೆಬ್ ಸೈಟ್ ಗಳಂತೆ ಕಂಡುಬಂದರು ಅವುಗಳಿಂದ ಅಧಿಕೃತವಲ್ಲದ ಲಿಂಕ್ ಗಳಿದ್ದಾಗ ತೆರದು ನೋಡಲು ಕೂಡ ಹೋಗಬೇಡಿ.
ಯಲ್ಲಾಪುರ ನ್ಯೂಸ್ ಆಗಾಗ ಈ ಕುರಿತು ಎಚ್ಚರಿಕೆ ನೀಡುತ್ತಲೇ ಇದೆ ಜಾಗೃತರಾಗಿ ಸುರಕ್ಷಿತರಾಗಿ.