ಕಟ್ಟಡ 25 ವರ್ಷ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮೇಲ್ಚಾವಣಿಯ ಸಿಮೆಂಟ್ ಶೀಟ್‌ಗಳು ಉದುರಿ ಬೀಳುತ್ತಿವೆ, ಗೋಡೆಗಳು ಕುಸಿಯುವ ಹಂತದಲ್ಲಿರುವುದರಿಂದ ಅಂಗನವಾಡಿಯೂ ಅಪಾಯಕ್ಕೆ ಸಿಲುಕಿದೆ. ಕಟ್ಟಡ ಕುಸಿದರೆ ಅಥವಾ ಬೀಳುವ ಶೀಟ್ ಗಳು ಮಕ್ಕಳಿಗೆ ಅಪಾಯ ಉಂಟಾಗಬಹುದಾದ ಸಾಧ್ಯತೆಯಿದೆ. ಕಟ್ಟಡದ ಸುತ್ತಮುತ್ತ ಕಸದ ನೀರಿನ ತೊಟ್ಟಿಗಳಿದ್ದು, ಮಳೆ ನೀರು ನಿಂತು ಸೊಳ್ಳೆಗಳು ವಾಸಸ್ಥಾನವಾಗಿದೆ. ಇದರಿಂದ ಡೆಂಗ್ಯೂ, ಮಲೇರಿಯಾ ಭಯ ಪಾಲಕರನ್ನು ಜನರನ್ನು ಕಾಡುತ್ತಿದೆ.
ಹಿಂದೆ ಭೂಕುಸಿತವಾದ ಪ್ರದೇಶದಲ್ಲಿ ಕಳಚೆಯ ಆಸ್ಪತ್ರೆ ಸಣ್ಣ ಕಟ್ಟಡದಲ್ಲಿ ನಡೆಯುತ್ತಿತ್ತು. ಭೂಕುಸಿತಾದ ನಂತರ ಆಸ್ಪತ್ರೆಯೇ ಇಲ್ಲದಂತಾಗಿದೆ. ಕಟ್ಟಡವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ಇನ್ನಷ್ಟು ವರ್ಷಗಳ ಕಾಲ ಈ ಕಟ್ಟಡವನ್ನು ಆರೋಗ್ಯ ಸಹಾಯಕರಿಗೆ ಬಳಸಬಹುದಾಗಿದೆ ಎಂಬುದು ಸ್ಥಳೀಯ ಜನರ ಅಭಿಪ್ರಾಯವಾಗಿದೆ.
ಕಟ್ಟಡ ಶಿಥಿಲವಾಗಿರುವುದರಿಂದ ಆರೋಗ್ಯ ಸಹಾಯಕಿಯರು ಇಲ್ಲಿ ವಾಸಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಕಳಚೆ ಸೇರಿ ಅಕ್ಕಪಕ್ಕದ 300 ಮನೆಗಳ 600ರಿಂದ 700 ಜನರಿಗೆ ಆರೋಗ್ಯ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಆರೋಗ್ಯ ಸಹಾಯಕಿಯರು ಇಲ್ಲಿ ವಾಸಿಸಲು ಅನುಕೂಲಕರ ವಾತಾವರಣವನ್ನು ಒದಗಿಸಬೇಕು. ಕಟ್ಟಡವನ್ನು ಭವಿಷ್ಯದಲ್ಲಿ ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ನಿರಂತರ ನಿರ್ವಹಣೆ ಮಾಡಬೇಕು. ಈ ಸಮಸ್ಯೆಯನ್ನು ಸಂಬಂಧಿತ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
(ವರದಿ ; ಜಗದೀಶ ನಾಯಕ/ದತ್ತಾತ್ರೇಯ ಕಣ್ಣಿಪಾಲ ವಜ್ರಳ್ಳಿ)
.