ಯಲ್ಲಾಪುರ : ಕಾರಿನಲ್ಲಿ ತಾಯಿಯವರುಗಳು ಕಾರಿನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ಬೆಳಿಗ್ಗೆ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ.
ಹುಣಶೆಟ್ಟಿಕೊಪ್ಪ ನಿವಾಸಿ 30 ವರ್ಷದ ಕಾರಿನಲ್ಲಿ ಮಗುವಿಗೆ ಜನ್ಮ ನೀಡಿದವರಾಗಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರನ್ನು ಆಂಬುಲೆನ್ಸ್ ಯಲ್ಲಾಪುರದಿಂದ ಬಂದು ಹುಣಶೆಟ್ಟಿಕೊಪ್ಪ ತಲುಪಿ ನಂತರ ಯಲ್ಲಾಪುರಕ್ಕೆ ತೆರಳುವುದು ವಿಳಂಬವಾಗುವ ಕಾರಣಕ್ಕೆ, ಆಕೆಯಲ್ಲಿ ಸಂಬಂಧಿಕರು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದು, ಮಗುವಿನ ತೂಕ ಮೂರುವರೆ ಕೆಜಿ ಇದೆ ಎನ್ನಲಾಗಿದೆ.
ತಾಲೂಕಾ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಂಜುನಾಥ ನಾಯಕ ಹಾಗೂ ಹೆರಿಗೆ ತಜ್ಞ ವೈದ್ಯರಾದ ಡಾ.ದೀಪಕ ಭಟ್ಟ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.
.