Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Sunday, 21 July 2024

ಯಲ್ಲಾಪುರದಲ್ಲಿ ಗುರು ಪೂರ್ಣಿಮೆ ಆಚರಣೆ: ವೇದ ವ್ಯಾಸರ ಜ್ಞಾನ ದೀಪ ಸ್ಮರಣೆ

ಯಲ್ಲಾಪುರ: ಯಲ್ಲಾಪುರದ ಅಡಿಕೆ ಭವನದಲ್ಲಿ ರವಿವಾರ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಯಲ್ಲಾಪುರ ಹಾಗೂ ಪತಂಜಲಿ ಅಂಗಸಂಸ್ಥೆಗಳ ಸಹಯೋಗದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಿತು.
  ಧಾರವಾಡದ ರಾಷ್ಟ್ರೋತ್ಥಾನ ಪರಿಷತ್ ಉಪನ್ಯಾಸಕರಾದ ರಾಮಚಂದ್ರ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವೇದ ವ್ಯಾಸರ ಜ್ಞಾನ ದೀಪವನ್ನು ಸ್ಮರಿಸಿಕೊಂಡರು. "ವೇದಗಳ ಜ್ಞಾನವನ್ನು ಒಟ್ಟುಗೂಡಿಸಿ ಮಹಾಭಾರತ ರಚಿಸಿದ ವೇದ ವ್ಯಾಸರು ನಮಗೆ ಜ್ಞಾನದ ಬೆಳಕನ್ನು ನೀಡಿದರು. ಗುರು ಪೂರ್ಣಿಮೆಯು ಜ್ಞಾನೋದಯದ ಸಂಕೇತವಾಗಿದೆ" ಎಂದು ಭಟ್ ಅವರು ತಿಳಿಸಿದರು.
   ಗುರು ತತ್ವ ನಿಷ್ಠನೂ ಶಿಷ್ಯರ ಹಿತವನ್ನು ಬಯಸುವವನೂ ಆಗಿರಬೇಕು, ಭಾರತದ ಪರಂಪರೆಯಲ್ಲಿ ಪ್ರತಿ ಕಾಲಘಟ್ಟದಲ್ಲಿಯೂ ದೇಶ ರಕ್ಷಣೆಯ ಜವಾಬ್ದಾರಿ ಹೊತ್ತವರು ಗುರುಗಳೇ ಆಗಿದ್ದಾರೆ. "ತನಗೆ ಮೋಕ್ಷವಾಗಬೇಕು ನಿಜ ಆದರೆ ಜಗತ್ತನ್ನ ಉಳಿಸಬೇಕು ಧರ್ಮವನ್ನು ರಕ್ಷಿಸಬೇಕು" ಎಂದು ಕಂಕಣಭದ್ಧರಾದ ವಿದ್ಯಾರಣ್ಯರು, ದಾದಾಜಿಕೊಂಡದೇವ, ಸಮರ್ಥರಾಮದಾಸರು, ರಾಮಕೃಷ್ಣ ಪರಮಹಂಸ, ಗುರು ಗೋವಿಂದ ಸಿಂಗ್ ರಂಥ ಅನೇಕ ಗುರುಗಳಿಂದ ನಮ್ಮ ಸಂಸ್ಕೃತಿ, ಸಮಾಜ ಮತ್ತು ರಾಷ್ಟ್ರದ ಉಳಿವು ಸಾಧ್ಯವಾಗಿದೆ. ಶಾಸ್ತ್ರದಲ್ಲಿರುವ ತತ್ವದ ಆಚರಣೆಯನ್ನು ಶಿಷ್ಯರು ಪಾಲಿಸುವಂತೆ ಮಾಡುವುದು ಮತ್ತು ಸ್ವಯಂ ಆಚರಣೆ ಮಾಡುವುದು ಅದುವೇ ಶ್ರೇಷ್ಠ ಗುರುವಿನ ತತ್ವವಾಗಬೇಕು. ಸ್ವಸ್ಥ ಮತ್ತು ಸುಸ್ಥಿರ ಸಮಾಜ ನಿರ್ಮಾಣದ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಗುರು-ಶಿಷ್ಯರ ಪರಂಪರೆ ನಮ್ಮದಾಗಬೇಕು ಎಂದು ಅವರು ಕರೆ ನೀಡಿದರು.
   ಯಲ್ಲಾಪುರ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್. ವಿ. ಹೆಗಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
   ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷ ನಾಗೇಶ ರಾಯಕರ, ಪತಂಜಲಿ ಜಿಲ್ಲಾ ಯುವ ಪ್ರಭಾರಿ ಶಿಕ್ಷಕ ದಿವಾಕರ ಮರಾಠಿ, ಜಿಲ್ಲಾ ಯೋಗ ವಿಸ್ತಾರಕ ಶಿಕ್ಷಕ ಸುಬ್ರಾಯ ಭಟ್ಟ, ಪತಂಜಲಿ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ, ಜಿ. ಎಸ್. ಭಟ್ಟ, ಪತಂಜಲಿ ಕಾರ್ಯದರ್ಶಿ ಸತೀಶ್ ಹೆಗಡೆ, ಜಿಲ್ಲಾ ಸಹ ಯುವ ಪ್ರಭಾರಿ ಕನಕಪ್ಪ, ಡಾ ಸುಚೇತಾ ಮದ್ಗುಣಿ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.
   ಪ್ರತಿ ವರ್ಷದಂತೆ ಈ ವರ್ಷವೂ ಪತಂಜಲಿ ಯೋಗ ಪೀಠ ಹರಿದ್ವಾರಕ್ಕೆ ಗುರು ಕಾಣಿಕೆಯನ್ನು ಸಮರ್ಪಿಸಲಾಯಿತು. ಜಿ.ಎಸ್. ಭಟ್ಟ ಹಳವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸುಬ್ರಾಯ ಭಟ್ಟ ವಂದಿಸಿದರು.