Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Monday, 8 July 2024

ವಜ್ರಳ್ಳಿ ಭೂಕುಸಿತ ವಲಯಕ್ಕೆ ವಿಶೇಷ ಗಮನ ಹರಿಸಲು ಆಗ್ರಹ

ಯಲ್ಲಾಪುರ: ರಾಜ್ಯದಲ್ಲಿಯೇ ಅತ್ಯಂತ ಭೀಕರ ಘಟನೆ ಸಂಭವಿಸಿದ ವಜ್ರಳ್ಳಿಯ ಭೂಕುಸಿತ ವಲಯವನ್ನು ಗಂಭೀರವಾಗಿ ಪರಿಗಣಿಸಬೇಕು. ನಿರಂತರ ಮಳೆಯ ಈ ಅವಧಿಯಲ್ಲಿ ಕಲಾಚೆಯಲ್ಲಿ ವಿದ್ಯುತ್ ಕೊರತೆಯಿಂದಾಗಿ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸೋಮವಾರ ನಡೆದ ವಾರ್ಡ್ ಸಭೆಯಲ್ಲಿ ಚರ್ಚಿಸಲಾಯಿತು. 
  ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದ ಪ್ರಸಕ್ತ ಸಾಲಿನ ವಾರ್ಡ್ ಸಭೆಯಲ್ಲಿ ಮಾತನಾಡಿದ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, "ಮಳೆಯಲ್ಲಿ ಕಳಚೆ ಗ್ರಾಮದ ಜನ ಆತಂಕದಲ್ಲಿ ಇದ್ದಾರೆ. ಈ ಬಗೆಗೆ ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ" ಎಂದರು.
   ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಸದಸ್ಯ ಗಜಾನನ ಭಟ್ಟ ಮಾತನಾಡಿ, "ಕಳಚೆ ಭೌಗೋಳಿಕವಾಗಿ ಘಟ್ಟ ಪ್ರದೇಶವಾಗಿರುವುದರಿಂದ ಇಲ್ಲಿಯ ಎಲ್ಲಾ ಸೌಲಭ್ಯದ ಜೊತೆಗೆ ಕಳಚೆಗೆ ಪ್ರತ್ಯೇಕ ವಿದ್ಯುತ್ ಲೈನ್ ಮೇನ್ ನಿಯೋಜಿಸಿ ನಿರಂತರವಾಗಿ ಕಾಡುವ ವಿದ್ಯುತ್ ವ್ಯವಸ್ಥೆಗೆ ಹೆಸ್ಕಾಂ ತಕ್ಷಣ ಪರಿಹಾರ ಒದಗಿಸಬೇಕು" ಎಂದು ಒತ್ತಾಯಿಸಿದರು.
  ವಾರ್ಡ್ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಸದಸ್ಯೆ ವೀಣಾ ಗಾಂವ್ಕರ್, ಕಾರ್ಯದರ್ಶಿ ದತ್ತಾತ್ರೇಯ ಆಚಾರಿ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್. ಬಂಟ್ ಸ್ವಾಗತಿಸಿ, ವಾರ್ಷಿಕ ಅನುದಾನದ ಹಂಚಿಕೆಯ ಯಾದಿ ಓದಿ ಹೇಳಿದರು. 
   ಸಾರ್ವಜನಿಕ ವಿವಿಧ ಅಹವಾಲುಗಳನ್ನು, ವಾರ್ಷಿಕ ಬೇಡಿಕೆಗಳನ್ನು ಸ್ವೀಕರಿಸಲಾಯಿತು. ನಂತರ ಈರಾಪುರ, ಹೊನ್ನಗದ್ದೆ, ಬೀಗಾರ ವಾರ್ಡ್ ಗಳಲ್ಲಿ ಸಭೆ ಜರುಗಿತು.