ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗುಳ್ಳಾಪುರದಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ದೊಡ್ಡ ಮರ ಒಂದು ಮನೆಯ ಮೇಲೆ ಉರುಳಿ ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಈ ದುರ್ಘಟನೆಗೆ ಗಂಗಾ ರಾಮಚಂದ್ರ ಪೂಜಾರಿ ಎಂಬವರ ಮನೆ ಮೇಲೆ, ಮರ ಬಿದ್ದು ಮನೆಗೆ ದೊಡ್ಡ ಮಟ್ಟದ ಹಾನಿಯಾಗಿದೆ.
ಮಳೆಯ ಪರಿಣಾಮ, ಪೂಜಾರಿ ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ. ಮಂಗಳವಾರ ದಿನವೂ ಮಳೆಯ ಸಂಭವನೆ ಇರುವ ಕಾರಣ, ಅವರ ಸಾಮಾನ್ಯ ಜೀವನಕ್ಕೆ ವ್ಯಾಪಕ ಪರಿಣಾಮ ಬೀರಿದೆ. ಮನೆಯ ಮೇಲಿನ ಕಂಬಗಳು, ಬೀಡಿಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಅವರು ನಿರಂತರ ಸುರಕ್ಷಿತ ಸ್ಥಳದ ಹುಡುಕಾಟದಲ್ಲಿದ್ದಾರೆ.
ಯಲ್ಲಾಪುರ ; ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗಂಗಾವಳಿ ನದಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ಯಾಂಕರ್ ಗಂಗಾವಳಿ ನದಿಗೆ ಬಿದ್ದು ತೇಲಿಕೊಂಡು ಹೋಗಿದೆ. ಘಟನೆಯಲ್ಲಿ 9 ಜನ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯ ನಿವಾಸಿಗಳಾದ ಲಕ್ಷಣ, ಶಾಂತಿ , ರೋಷನ್ , ಅವಂತಿಕಾ ಹಾಗೂ ಜಗನ್ನಾಥ ಕಾಣೆಯಾದವರಾಗಿದ್ದು, ಮಣ್ಣಿನಲ್ಲಿ ಸಿಲುಕಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಟ್ಯಾಂಕರ್ ಚಾಲಕ ಟೀ ಅಂಗಡಿಯಾತ ಟೀ ಕುಡಿಯಲು ಬಂದವರು ಸೇರಿ ಒಟ್ಟು 9ಜನ ಕಾಣೆಯಾಗಿದ್ದಾರೆ ಎನ್ನಲಾಗಿದೆ.