ಯಲ್ಲಾಪುರ : ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ 63 ವರ್ಷಕ್ಕೆ 64ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಜನ್ಮದಿನದಂದು ಭಾರತೀಯ ಜನತಾ ಪಾರ್ಟಿ ಎಲ್ಲಾಪುರ ಮಂಡಳಿ ಪದಾಧಿಕಾರಿಗಳು ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸಿಹಿ ವಿತರಿಸಿ ಶಾಲುಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಳ ಹಿರಿಯ ಕಾರ್ಯಕರ್ತ ಗಣಪತಿ ಬೋಳಗುಡ್ಡೆ, ನಿಕಟಪೂರ್ವ ಅಧ್ಯಕ್ಷ GN ಗಾಂವ್ಕರ ಮತ್ತು, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮತ್ತು ಪ್ರದೀಪ ಯಲ್ಲಾಪುರಕರ ಇದ್ದರು.
ಯಲ್ಲಾಪುರ ; ಅಂಕೋಲಾ ತಾಲೂಕಿನ ಅರೆಬೇಣದ ಕಾಡಿನ ರಸ್ತೆಯಲ್ಲಿ ಶಿಕ್ಷಕ ಮಹಾದೇವ ಸಂಬಾಜಿ ಅವರ ಜೊತೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಕಾಡಿನ ಮಧ್ಯ ತೆರಳುತ್ತಿದ್ದಾಗ ಕಾಡಿನಲ್ಲಿ ಹೂಗಿಡವೊಂದು ಬಿಟ್ಟ ಮೊಗ್ಗು, ಹೂವು ತುಂಬಿದ ಚಿಕ್ಕ ರೆಂಬೆ ಬಹುವಾಗಿ ಆಕರ್ಷಣೆ ಮಾಡಿಸಿದೆ.
ಈ ಹೂವಿನ ಚಿತ್ರ ತೆಗೆದು ಬೀರಣ್ಣ ನಾಯಕ ಮೊಗಟಾರವರು ಯಲ್ಲಾಪುರ ನ್ಯೂಸ್ ಓದುಗರಿಗರಿಗೆ ನೀಡಿದ್ದಾರೆ.
ಜು.11 ಮತ್ತು 12 ಉಮ್ಮಚಗಿ ವಾರ್ಡ ಮತ್ತು ಗ್ರಾಮ ಸಭೆ
ಯಲ್ಲಾಪುರ : 2024-25ನೇ ಸಾಲಿನ ಉಮ್ಮಚಗಿ ಗ್ರಾಪಂ ವಾರ್ಡ್ ಸಭೆಗಳು ಜುಲೈ 11ರಂದು ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಚವತ್ತಿ, ಬೆಳಗುಂದ್ಲಿ ದೇವಸ್ಥಾನದ ಆವಾರ, ಶೀಗೇಮನೆ, ಹಲಸಿನಕೊಪ್ಪ ಕಿರಿಯ ಪ್ರಾಥಮಿಕ ಸರಕಾರಿ ಶಾಲೆ, ಕೋಟೆಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕ್ರಮಾನುಸಾರ ಬೆಳಿಗ್ಗೆ10 ಗಂಟೆ, 11 ಗಂಟೆ, ಮಧ್ಯಾನ್ಹ 12-30 ಗಂಟೆ, ಮಧ್ಯಾನ್ಹ 3 ಗಂಟೆ, ಮಧ್ಯಾನ್ಹ 4 ಗಂಟೆಗೆ ನಡೆಯಲಿದೆ.
ಜುಲೈ 12ರಂದು ಬೆಳಿಗ್ಗೆ 10-30 ಕ್ಕೆ ಉಮ್ಮಚಗಿ ವಿದ್ಯಾಗಣಪತಿ ದೇವಸ್ಥಾನ ಪಕ್ಕದ ಸಭಾಭವನದಲ್ಲಿ ಗ್ರಾಮಸಭೆ ನಡೆಯಲಿದ್ದು, ಪಂಚಾಯತ ವ್ಯಾಪ್ತಿಯ ಗ್ರಾಮಸ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಬೇಡಿಕೆ ಮತ್ತು ಸಲಹೆ ಸೂಚನೆಗಳನ್ನು ನೀಡಬೇಕಾಗಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ನಸ್ರೀನಾ ಎಕ್ಕುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.