ಯಲ್ಲಾಪುರ : ಅರಣ್ಯಾವೃತ ಹಾಗೂ ವಿಶಾಲವಾದ ಯಲ್ಲಾಪುರ ಭಾರಿ ಮಳೆ ಗಾಳಿ ಆಗುವ ಪ್ರದೇಶವಾಗಿದೆ. ಹೆಸ್ಕಾಂ ನಿಗಮದ ತುರ್ತು ಕಾಮಗಾರಿಗೆ ಪ್ರಾದೇಶಿಕ ವೆಚ್ಚವನ್ನು ಕೈ ಬಿಟ್ಟಿರುವ ಬಗ್ಗೆ ಯಲ್ಲಾಪುರಸ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವರು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಯಲ್ಲಾಪುರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಮಾಕಾಂತ ನಾಯ್ಕರವರ ಮೂಲಕ ಪತ್ರ ನೀಡಿ ಆಗ್ರಹಿಸಿದ್ದಾರೆ.
ಸೋಮವಾರ ಹೆಸ್ಕಾಂ ಕಚೇರಿಗೆ ತೆರಳಿದ ಗುತ್ತಿಗೆದಾರರು ತಾಲೂಕಿನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಮುರಿದ ಕಂಬ, ತಂತಿಗಳನ್ನು ಬದಲಾಯಿಸುವುದು ಶೀಘ್ರ ಕಾರ್ಯನಿರ್ವಹಣೆ ಕಷ್ಟವಾಗಿದೆ. ಅರಣ್ಯ ಪ್ರದೇಶದಲ್ಲಿ ಈ ಕಾರ್ಯ ಅತಿ ಜಟಿಲವಾಗಿದೆ, ಮರಗಳು ಮಾರ್ಗದ ಮೇಲೆ ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯ ಆಗುತ್ತದೆ. ತಲೆಯ ಮೇಲೆ ಕಂಬಗಳನ್ನು ಹೊತ್ತೇ ಸಾಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. 2023-24 ದರ ಪಟ್ಟಿಯಲ್ಲಿ ತುರ್ತು ಮತ್ತು ಪ್ರಾದೇಶಿಕ ವೆಚ್ಚ ಸೇರಿಸದ ಕಾರಣ ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ತುರ್ತು ವೆಚ್ಚ ಶೇ. 25 ಮತ್ತು ಪ್ರಾದೇಶಿಕ ವೆಚ್ಚ ಶೇ. 45 ಸೇರಿಸುವಂತೆ ಮನವಿಯಲ್ಲಿ ತಿಳಸಿದ್ದಾರೆ.