ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮಾನಸಿಕ ಆರೋಗ್ಯ ದಿನ : ನ್ಯಾ. ಲಕ್ಷ್ಮೀಬಾಯಿ ಪಾಟೀಲ್
ಯಲ್ಲಾಪುರ : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ 'ಮಾನಸಿಕ ಆರೋಗ್ಯ ದಿನ'ವನ್ನು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿ, ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯತ್ನಗಳನ್ನು ಸಜ್ಜುಗೊಳಿಸುವುದಕ್ಕಾಗಿ ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಅನಾರೋಗ್ಯವನ್ನು ನಿರ್ಲಕ್ಷಿಸಕೂಡದು ಎಂದು ಹೇಳಿದ ಅವರು ಎಲ್ಲರನ್ಬೂ ಒಂದೆ ಬಗೆಯಲ್ಲಿ ನೋಡಲಾಗದು. ಸೂಕ್ತ ಚಿಕಿತ್ಸೆ ಹಾಗೂ ಒಳ್ಳೆಯ ಒಡನಾಟದಿಂದ ಮಾನಸಿಕ ಖಿನ್ನತೆಗೆ ಒಳಗಾದವರನ್ನು ಗುಣಪಡಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ತಜ್ಞರಾದ ಡಾ ಮಾದಣ್ಣನವರು ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಬೇಕಾದರೇ ರೋಗಿಗೆ ಚಿಕಿತ್ಸೆ, ಕೌನ್ಸಿಲರ್ ಎರಡು ಒಂದೆ ಸ್ಥಳದಲ್ಲಿ ಸಿಗುವಮನತಾಗಬೇಕು ಎಂದರು.
ಮಾನಸಿಕ ಆರೋಗ್ಯ ದಿನದ ಬಗ್ಗೆ ಪ್ಯಾನಲ್ ವಕೀಲರಾದ ಸರಸ್ವತಿ ಜಿ ಭಟ್ ಉಪನ್ಯಾಸ ನೀಡಿ ಕೇವಲ ಶಾರಿಕ ಆರೋಗ್ಯವಷ್ಟೆ ಆರೋಗ್ಯವೆಂದು ಪರಿಗಣಿಸಲಾಗದು, ಮಾನಸಿಕವಾಗಿ ಸ್ವಾಸ್ಥ್ಯವಾಗಿರುವುದು ಕೂಡ ಅಷ್ಟೆ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ಆರೋಗ್ಯ ಗುರಿಗಳನ್ನು ಸಾಧಿಸುವಲ್ಲಿ ಮಾನಸಿಕ ಆರೋಗ್ಯವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಕು.ಝೀನತ್‌ಬಾನು ಶೇಖ್, ಅರೆಕಾಲಿಕ ನ್ಯಾಯಿಕ ಸೇವಕರಾದ ಗಣಪತಿ ನಾಯ್ಕ, ಲಕ್ಷ್ಮಿ ಸಿದ್ದಿ, ಶ್ರೀಧರ ಮಡಿವಾಳ, ನಾರಾಯಣ ಕಾಂಬಳೆ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಜಿ ಭಟ್ ಸ್ವಾಗತಿಸಿ, ನಿರೂಪಿಸಿದರು ಅರೆಕಾಲಿಕ ಸ್ವಯಂ ಸೇವಕರಾದ ಸುಧಾಕರ ನಾಯಕ ವಂದಿಸಿದರು.
.