ಯಲ್ಲಾಪುರ : ಪಟ್ಟಣದ ಗ್ರಾಮದೇವಿ ನಗರದ ಈಶ್ವರಗಲ್ಲಿ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಹೂವಿನ ಅಲಂಕಾರ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಬೆಳಿಗ್ಗೆಯಿಂದ ದೇವರಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಪಂಚಾಮೃತಾಬಿಷೇಕ, ಏಕಾದಶ ರುದ್ರಾಭಿಷೇಕ ಹಣ್ಣುಕಾಯಿ ಸೇವೆ, ತೀರ್ಥ-ಪ್ರಸಾದ ವಿತರಣೆ ನಡೆಯಿತು. ಈಶ್ವರ ಲಿಂಗ ಹಾಗೂ ಸಂಪೂರ್ಣ ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು, ಮಹಾಪೂಜೆಯ ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಮತ್ತೋರ್ವ ತಹಶೀಲ್ದಾರ ಸಿ ಜಿ ನಾಯ್ಕ ಮುಂತಾದ ಗಣ್ಯರು, ವಿವಿಧ ಪಕ್ಷದ ಪ್ರಮುಖರು ಅನ್ನಪ್ರಸಾದ ಸ್ವೀಕರಿಸಿದರು. ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ, ಸಮಿತಿಯ ಪ್ರಮುಖರಾದ ಅರುಣ ಗುಡಿಗಾರ, ಸಂತೋಷ ಗುಡಿಗಾರ, ಪ್ರಕಾಶ ಕವಳಿ ಮುಂತಾದವರು ಉಪಸ್ಥಿತರಿದ್ದು ವ್ಯವಸ್ಥೆ ಮಾಡಿದ್ದರು.
.