ಉದ್ದೇಶಿತ ಸಿಟಿ ಬಸ್ ನಿಲ್ದಾಣ ಸ್ಥಳಕ್ಕೆ ಸಚಿವ ಹೆಬ್ಬಾರ್ ಭೇಟಿ ಪರಿಶೀಲನೆ
ಯಲ್ಲಾಪುರ : ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟರಮಣ ಮಠದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 63ಪಕ್ಕದಲ್ಲಿ ಪಟ್ಟಣ ಪಂಚಾಯತ ವತಿಯಿಂದ "ಸಿಟಿ ಬಸ್ ನಿಲ್ದಾಣ" ವನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳಕ್ಕೆ ಮಂಗಳವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಕೆಲವೇ ತಿಂಗಳಲ್ಲಿ ಯಲ್ಲಾಪುರ ಗ್ರಾಮದೇವಿ ಜಾತ್ರೆ ಬರಲಿದ್ದು, ಯಲ್ಲಾಪುರದ ಮುಖ್ಯ ಬಸ್ ನಿಲ್ದಾಣಕ್ಕೆ ಒತ್ತಡ ಹೆಚ್ಚಾಗುತ್ತದೆ. ಹಳಿಯಾಳ ಕಲಘಟಗಿ, ಹುಬ್ಬಳ್ಳಿ ದಾಂಡೇಲಿ ಕಡೆಯಿಂದ ಬರುವ ಜನರಿಗೆ ಸೂಕ್ತ ಬಸ್ ನಿಲ್ದಾಣವಾಗಲಿದೆ ಎನ್ನುವ ನಿಟ್ಟಿನಲ್ಲಿ ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಸ್ ನಿಲ್ದಾಣವನ್ನು ಸೆಟೆಲೈಟ್ ಬಸ್ ನಿಲ್ದಾಣವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಈ ಕಾರಣಕ್ಕಾಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಲಕೃಷ್ಣ ನಾಯಕ, ಪ.ಪಂ ಸದಸ್ಯರಾದ ಅಮಿತ್ ಅಂಗಡಿ, ಸತೀಶ ನಾಯ್ಕ ಹಾಗೂ ಸ್ಥಳೀಯ ಪ್ರಮುಖರು, ಅಧಿಕಾರಿಗಳು ಇದ್ದರು.
.