ಕೇರಳ : ಶಿಕ್ಷಿತರ ನಾಡು ಕೇರಳದಲ್ಲಿ ಮೂಢನಂಬಿಕೆ ಪ್ರಕರಣ ವರದಿಯಾಗಿದೆ. ಕೇರಳದ ದೇವಸ್ಥಾನದಲ್ಲಿ ಇಬ್ಬರು ಮಹಿಳೆಯರ ನರಬಲಿ ಮಾಡಲಾಗಿದೆ. ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರ ನರಬಲಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಕೇರಳದ ತಿರುವಲ್ಲಾದಲ್ಲಿ ಶಂಕಿತ ನರಬಲಿ ಪ್ರಕರಣದಲ್ಲಿ ಹತ್ಯೆಗೀಡಾಗಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆಯರನ್ನು ಎರ್ನಾಕುಲಂನಿಂದ ಅಪಹರಿಸಿ ತಿರುವಲ್ಲಾದಲ್ಲಿ ಕೊಲೆ ಮಾಡಲಾಗಿದೆ.
ಪದ್ಮ ಮತ್ತು ರೋಸ್ಲಿನ್ ಬಲಿಪಶುಗಳು ಎಂದು ಗುರುತಿಸಲಾಗಿದೆ. ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್ ಎಂಬುವವರನ್ನು ಕೊಲೆಯ ಮಾಡಿರುವ ಶಂಕಿತರಾಗಿದ್ದಾರೆ. ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿರಬಹುದಾಗಿದೆ.
ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಫೋನ್ ಗಳನ್ನು ಮುಹಮ್ಮದ್ ಶಫಿ ಎಂಬಾತನ ಬಳಿ ಪತ್ತೆ ಮಾಡಲಾಗಿದ್ದು, ಆತ ಒಡೆದು ಹಾಕಿದ್ದು, ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಎರ್ನಾಕುಲಂ ಕಾಣೆಯಾದ ಮಹಿಳೆಗೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದಾಗ, ಆಕೆಯನ್ನು ತಿರುವಲ್ಲಾದ ಆ ದಂಪತಿ ಮನೆಯಲ್ಲಿ ಕೊಂದು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಹೂಳಲಾಗಿದೆ. ಇದು ಆರ್ಥಿಕ ಲಾಭಕ್ಕಾಗಿ ದಂಪತಿ ನರಬಲಿ ನೀಡಿದ್ದಾರೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ಹೇಳಿದ್ದಾರೆ.
ದಂಪತಿ ವಿಚಾರಣೆಗೆ ಒಳಪಡಿಸಿದಾಗ, ಜೂನ್‌ನಲ್ಲಿ ಅದೇ ಮನೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ನರ ಬಲಿ ನೀಡಿರುವ ಬಗ್ಗೆ ಅವರು ಒಪ್ಪಿಕೊಂಡರು. ಆ ಮಹಿಳೆ ರೋಸೆಲಿನ್ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಹಲವು ದಂಪತಿಗಳು ಆರ್ಥಿಕ ಲಾಭಕ್ಕಾಗಿ ನರಬಲಿ ಮಾಡಲಾಗಿದೆ. ಅಲ್ಲದೆ, ಮಧ್ಯವರ್ತಿ ಹಣ ಪಡೆದಿರುವುದು ನಮಗೆ ತಿಳಿದಿದೆ. ಇಡೀ ಪ್ರಕರಣವನ್ನು ಬಹಿರಂಗಪಡಿಸಲು ನಮಗೆ ಹೆಚ್ಚಿನ ಸಮಯ ಬೇಕು. ಕೊಲೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಮಾಟಮಂತ್ರ ಮತ್ತು ನರಬಲಿ ಪ್ರಕರಣವಾಗಿದೆ. ಪೊಲೀಸರು ಎಲ್ಲಾ ಅಂಶಗಳನ್ನು ಮತ್ತು ವಿವರಗಳನ್ನು ಪರಿಶೀಲಿಸುತ್ತಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ ಪಿ ಪ್ರಕಾಶ್ ಹೇಳಿದ್ದಾರೆ.