ಯಲ್ಲಾಪುರ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಘಟಕ, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ ಹಾಗೂ ತಾಲೂಕಾ ಆಸ್ಪತ್ರೆಗಳ ಸಹಾಯೋಗದಲ್ಲಿ
ಅಕ್ಟೋಬರ್ 15 ರಂದು ಬೆಳಿಗ್ಗೆ 9.30 ಕ್ಕೆ ಉಚಿತ, ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ತಾ.ಪಂ. ಸಿ.ಇ.ಓ ಜಗದೀಶ ಕಮ್ಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಿದ್ದಾಪುರ ಧನ್ವಂತರಿ, ಆರ್ಯುವೇದ ಕಾಲೇಜು ಪ್ರಾಚಾರ್ಯರಾದ ಡಾ.ರೂಪಾ ಭಟ್ಟ, ರಾಜ್ಯ ಕೆ.ಜೆ.ಯೂನಿಯನ್ ಕಾರ್ಯಕಾರಣಿ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಅಧ್ಯಕ್ಷ ಶಂಕರ ಭಟ್ಟ, ತಾರೀಮಕ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ.ರೂಪಾ ಭಟ್ಟ, (ಪ್ರಾಚಾರ್ಯರು, ಧನ್ವಂತರಿ ಆಯುರ್ವೇದ ಕಾಲೇಜು, ಸಿದ್ದಾಪುರ) ಡಾ.ಮಧುಕೇಶ್ವರ ಹೆಗಡೆ, (ಉಪನ್ಯಾಸಕರು, ಧನ್ವಂತರಿ ಆಯುರ್ವೇದ ಕಾಲೇಜು, ಸಿದ್ದಾಪುರ), ಡಾ. ಚೈತ್ರಿಕಾ ಹೊಸುರು, (ಉಪನ್ಯಾಸಕರು, ಧನ್ವಂತರಿ ಆಯುರ್ವೇದ ಕಾಲೇಜು, ಸಿದ್ದಾಪುರ), ಡಾ. ಕೇಶವ್ ರಾಜ್ ವಿ.ವಿ., (ಆಯುಷ್ ವೈದ್ಯರು, ಯಲ್ಲಾಪುರ), ಡಾ. ನರೇಂದ್ರ ಪವಾರ (ತಾಲೂಕ ಆರೋಗ್ಯ ಅಧಿಕಾರಿ, ಆಸ್ಪತ್ರೆ ವೈದ್ಯಾಧಿಕಾರಿ ಯಲ್ಲಾಪುರ) ಶಿಬಿರದಲ್ಲಿ ಭಾಗವಹಿಸುವ ವೈದ್ಯರಾಗಿದ್ದಾರೆ ಎಂದು ಯಲ್ಲಾಪುರ ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ ಹಾಗೂ ತಾಲೂಕಾ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.