ಯಲ್ಲಾಪುರ : ತಾಲ್ಲೂಕಿನಿಂದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟಕ್ಕೆ ಪ್ರತಿನಿಧಿಸಿದ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವಿಜ್ಞಾನದ ಅಕಟಕಟಾ ಶೀರ್ಷಿಕೆಯ ನಾಟಕವು ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ.
ಬುಧವಾರ ಶಿರಸಿ ನಗರದ ಅವೆಮೇರಿಯಾ ಪ್ರೌಢಶಾಲೆಯಲ್ಲಿ ಜರುಗಿದ ಹತ್ತು ಪ್ರೌಢಶಾಲೆಯ ನಾಟಕ ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ವಿಜೇತರಾದ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಪ್ರಶಸ್ತಿ ಪಡೆದು, ಪ್ರಶಸ್ತಿ ಪತ್ರ, ನಗದು ಬಹುಮಾನದ ಗೌರವವನ್ನು ಪಡೆದರು.
ಆರೋಗ್ಯ ಲಸಿಕೆಯ ಮಹತ್ವಸಾರುವ "ಅಕಟಕಟಾ" ನಾಟಕದಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ಸುಮೇಧಾ ಗಾಂವ್ಕಾರ, ದೀಕ್ಷಾ ಭಟ್ಟ, ಶ್ವೇತಾ ಗಾಂವ್ಕಾರ, ಸಿಂಧು ಆಚಾರಿ, ಧನ್ಯಶ್ರೀ ಕೋಮಾರ, ಭಾವನಾ ಭಟ್ಟ, ಗೌತಮಿ ಕೋಮಾರ, ವಿದ್ಯಾ ನಾಯ್ಕ, ಭೂಮಿಕಾ, ನಾಗಶ್ರೀ, ಪವಿತ್ರಾ, ರಕ್ಷಿತಾ, ಪಾತ್ರವಹಿಸಿದ್ದರು.
ಪ್ರೌಢಶಾಲೆಯ ಹಂತದಲ್ಲಿ ವಿಜ್ಞಾನ ವಿಭಾಗದಲ್ಲಿ ಒಟ್ಟೂ ನಾಲ್ಕು ವಿಷಯಗಳಲ್ಲಿ ಒಂದರ ಕುರಿತಾಗಿ ಮೂವತ್ತು ನಿಮಿಷದ ಕಾಲಮಿತಿಯಲ್ಲಿ ನಾಟಕವನ್ನು ಪ್ರದರ್ಶಿಸಬೇಕಾಗಿತ್ತು.
ಈ ಸಂದರ್ಭದಲ್ಲಿ ಸರ್ವೋದಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸರೋಜಾ ಭಟ್ಟ, ಶಿಕ್ಷಕರಾದ ಚಿದಾನಂದ ಹಳ್ಳಿ, ರವೀಂದ್ರ ಗಾಂವ್ಕಾರ, ದತ್ತಾತ್ರೇಯ ಭಟ್ಟ ಉಪಸ್ಥಿತರಿದ್ದರು.
ಅಕಟಕಟಾ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸಾಧನೆ ಮಾಡಿ ವಿಜೇತರಾದ ವಿದ್ಯಾರ್ಥಿನಿಯರನ್ನು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ.ಶಂಕರ. ಭಟ್, ಗೌರವ ಕಾರ್ಯದರ್ಶಿ ಆರ್ ಎ ಭಟ್ ತೋಟ್ಮನೆ, ಉಪಾಧ್ಯಕ್ಷರಾದ ವಿ ಎನ್ ಭಟ್ಟ, ಹಾಗೂ ಸಮಿತಿಯ ಸದಸ್ಯರು, ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.