


ನಂತರ ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸಭಾಂಗಣದ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ, ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ "ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ" ಗ್ರಾಮಸ್ಥರ ಸಹಕಾರದೊಂದಿಗೆ ರೈತಾಪಿ ವರ್ಗದ ಉಸಿರಾಗಿರುವ ಕೆರೆಗಳ ಹೂಳೆತ್ತಿ ಮರು ಜೀವ ನೀಡಿ ನಂತರ ಕೆರೆಯನ್ನು ಊರಿನವರಿಗೆ ಹಸ್ತಾಂತರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಹುಬ್ನಳ್ಳಿ ಅಧ್ಯಕ್ಷರಾದ ಅಶೋಕ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕರಾದ ಡಾ.ರವಿ ಭಟ್ ಬರಗದ್ದೆ, ಗ್ರಾಮ ಪಂಚಾಯತ ಅಧ್ಯಕ್ಷರಾದ ನೇತ್ರಾವತಿ ಹೆಗಡೆ, ಸದಸ್ಯರಾದ ಆರ್.ಎಸ್.ಭಟ್, ಸುಭಾಷ್ ಮರಾಠಿ, ರೇಣುಕಾ ಸಿದ್ದಿ, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ಬಾಬು ನಾಯ್ಕ, ಹನುಮಂತ ನಾಯ್ಕ ಹಾಗೂ ಸ್ಥಳೀಯ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.