Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 8 September 2022

ಕುಂದರಗಿ ಗ್ರಾ ಪಂ ಉಪಾಧ್ಯಕ್ಷ ದಾಕ್ಲು ನವಲು ಪಾಟೀಲ್ ರಿಂದ ಕ್ರೀಡಾಪಟುಗಳಿಗೆ ಸಮವಸ್ತ್ರ

 

Joint-Pics-20220908-130051 ಯಲ್ಲಾಪುರ ; ಯಲ್ಲಾಪುರ ತಾಲೂಕಿನ ಗಡಿ ಭಾಗವಾದ ಉಚಗೇರಿಯ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟು ವಿದ್ಯಾರ್ಥಿಗಳಿಗೆ, ಆ ಬಾಗದ ಪಂಚಾಯತ ಸದಸ್ಯ ಹಾಗೂ ಕುಂದರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ದಾಕ್ಲು ನವಲು ಪಾಟೀಲ್ ಗುರುವಾರ ಬೆಳಿಗ್ಗೆ ತಮ್ಮ ಸ್ವಂತಃ ಕ್ರೀಡಾ ಸಮವಸ್ತ್ರ ವಿತರಿಸಿದರು. IMG-20220908-130028 ನಂತರ ಮಾತನಾಡಿದ ಅವರು, ನಾನು ಈ ಶಾಲೆಯ ಹಳೇ ವಿದ್ಯಾರ್ಥಿ, ನಾವೂ ಚಿಕ್ಕವರಿದ್ದಾಗ ಕ್ರೀಡಾ ಕೂಟಕ್ಕೆ ಹೋಗುವಾಗ ನಮಗೇ ಸಮವಸ್ತ್ರ ಇದ್ದಿರಲಿಲ್ಲ. ಬೇರೇ ಶಾಲೆಯ ಮಕ್ಕಳು ಸಮವಸ್ತ್ರ ನೋಡಿ ನಮಗೂ ಈ ತರಹ ಸಮವಸ್ತ್ರ ಇರಬೇಕಿತ್ತು ಅನಿಸುತಿತ್ತು. ಆದರೆ ನೀವುಗಳು ಪುಣ್ಯವಂತರು. ಈ ಹಿಂದೆ ಈ ಶಾಲೆಯ ಹೆಣ್ಣುಮಕ್ಕಳಿಗೆ ಸಮವಸ್ತ್ರ ನೀಡಿದ್ದೆ, ಇಂದು ಗಂಡು ಮಕ್ಕಳಿಗೆ ಸಮವಸ್ತ್ರ ನೀಡುತ್ತಿದ್ದೆನೆ. ಸಮವಸ್ತ್ರ ತೊಟ್ಟು ಒಳ್ಳೆಯ ಕ್ರೀಡಾ ಪಟುವಾಗಿ ಶಾಲೆಯ ಹಾಗು ಊರಿನ ತರುವಂತೆ ಕೋರಿದರು.
 ಈ ಸಂದರ್ಭದಲ್ಲಿ ಉಚಗೇರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸವಿತಾ ಹೆಗಡೆ, ಸದಸ್ಯರಾದ ಕೊಂಡು ಕೊಕ್ರೆ, ವಿಠ್ಠಲ್ ಲಂಬೋರ್ , ಮಂಗಳ ಸಿದ್ದಿ, ಕಾಶಿ ಗಂಗಾಧರ್, ಸುರೇಶ್ ಮಡಿವಾಳ, ನಾಗು ತೊರವತ, ವಿಠ್ಠಲ್ ಕೋಕ್ರೆ, ವಿನೋದ್ ದೇವಾಡಿಗ, ರತ್ನಾ ನೆರಲಗಿ, ಪಟ್ಟಿ ಕೊಕ್ರೇ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಅರ್ ಟಿ ಭಟ್, ಸಹ ಶಿಕ್ಷಕರಾದ ಸುಧಾ ಹೆಗಡೆ, ರಾಮಕೃಷ್ಣ ಬಂಡಾರಿ, ಶ್ರೀಕರ್ ಹೆಗಡೆ ಹಾಗೂ ಮಕ್ಕಳ ಪಾಲಕರು ಹಾಗೂ ಪೋಷಕರು ಇದ್ದರು.