ಯಲ್ಲಾಪುರ : ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಜನ್ಮದಿನದಂದ ಅಂಗವಾಗಿ ಅಭಿಮಾನಿಗಳ ಬಳಗ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ' ಬೃಹತ್ ರಕ್ತ ದಾನ ಹಾಗೂ ನೇತ್ರದಾನ ನೊಂದಣಿ ಶಿಬಿರ " ವನ್ನು ಹಮ್ಮಿಕೊಳ್ಳಲಾಗಿತ್ತು.
ಸಚಿವ ಶಿವರಾಮ ಹೆಬ್ಬಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ " ರಕ್ತ ದಾನ ಹಾಗೂ ನೇತ್ರದಾನ ನೊಂದಣಿ ಶಿಬಿರ " ಕ್ಕೆ ಚಾಲನೆ ನೀಡಿ, ರಕ್ತದಾನಿ ಹಾಗೂ ನೇತ್ರದಾನಿಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಿದರು. ತಾಲೂಕಾ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಈ ಸಂದರ್ಭದಲ್ಲಿ ಶಿವರಾಮ ಹೆಬ್ಬಾರ್ ಪತ್ನಿ ವನಜಾಕ್ಷಿ ಹೆಬ್ಬಾರ್, ಬಿಜೆಪಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್.ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ಜಿ.ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಉದ್ಯಮಿ ಬಾಲಕರತಷ್ಣ ನಾಯಕ, ಪ.ಪಂ ಮಾಜಿ ಅಧ್ಯಕ್ಷ ಶಿರಿಷ್ ಪ್ರಭು, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ, ತಾ.ಪಂ ಮಾಜಿ ಸದಸ್ಯೆ ರಾಧಾ ಹೆಗಡೆ, ಗುತ್ತಿಗೆದಾರ ಮಾಲತೇಶ ಗೌಳಿ, ಪ.ಪಂ ಸದಸ್ಯರಾದ ಅಮೀತ ಅಂಗಡಿ ಹಾಗೂ ಸತೀಶ ನಾಯ್ಕ, ಬಿಜೆಪಿಯ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು , ಹೆಬ್ಬಾರ್ ಅಭಿಮಾನಿಗಳು ಇದ್ದರು .