ಯಲ್ಲಾಪುರ: ಅತ್ಯಂತ ಕುತೂಹಲ ಕೆರಳಿಸಿದ ತಾಲೂಕಿನ ದೇಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಮಾ.12ರ ಶನಿವಾರ ನಡೆದು ಗಣಪತಿ ಮುದ್ದೇಪಾಲ ತಂಡ ಜಯಭೇರಿ ಬಾರಿಸುವುದರ ಮೂಲಕ ಸಂಭ್ರಮಿಸಿದರು.
ಸಾಮಾನ್ಯ(ಸಾಲಗಾರ ಕ್ಷೇತ್ರದಿಂದ ಗಣಪತಿ ರಾಮಚಂದ್ರ ಮುದ್ದೇಪಾಲ, ಗಣೇಶ ಸುಬ್ರಾಯ ಮೆಣಸುಮನೆ, ರವೀಂದ್ರ ಗೋಪಾಲಕೃಷ್ಣ ಕೋಟೆಮನೆ, ವಿನಾಯಕ ಸದಾನಂದ ಭಟ್ಟ, ಶ್ರೀಪತಿ' ರಾಮಚಂದ್ರ ಮುದ್ದೇಪಾಲ, ಹಿಂದುಳಿದ ವರ್ಗ(ಅ)ದಿಂದ ಶಿವರಾಜ ರಾಮಚಂದ್ರ ಗೌಡ, ಮಹಿಳಾ ಕ್ಷೇತ್ರದಿಂದ ತಾರಾಬಾಯಿ ರಾಜಾರಾಮ ಭಟ್ಟ, ಹೇಮಾ ಹೇರಂಭ ಮಾವಿನಗದ್ದೆ, ಸಾಲಗಾರರಲ್ಲದ ಕ್ಷೇತ್ರದಿಂದ ರಾಮದಾಸ ಸೈರು ಭಂಡಾರಿ 22 ಮತಗಳನ್ನು ಪಡೆದು. ಜಯಭೇರಿ ಬಾರಿಸಿದ್ದು ಇವರ ವಿರುದ್ಧ ಸ್ಪರ್ಧಿಸಿದ್ದ ನಾಗರಾಜ ಚಾಪೆತೋಟ ಕೇವಲ 4 ಮತಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ತಂಡದ ಗೆಲುವಿಗೆ ಕಾರಣೀಕರ್ತರಾದ ಸದಸ್ಯರು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಗಣಪತಿ ಮುದ್ದೇಪಾಲ ಅಭಿನಂದನೆ ಸಲ್ಲಿಸಿದ್ದಾರೆ.
ಪಿ.ಎಲ್.ಡಿ ಬ್ಯಾಂಕ್ ಗೆ ಆಯ್ಕೆಯಾದವರಿಗೆ ಹೆಬ್ಬಾರ್ ಅಭಿನಂದನೆ
ಯಲ್ಲಾಪುರ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ನ ತೆರವಾಗಿದ್ದಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಿರೀಶ್ ಹೆಗಡೆ ಹಾಗೂ ಎನ್.ಸಿ. ಗಾಂವ್ಕರ್ ಅವರು ಆಯ್ಕೆಯಾಗಿದ್ದಾರೆ.
ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದ ಬಳಿ ನೂತನ ನಿರ್ದೇಶಕರಾದ ಗಿರೀಶ್ ಹೆಗಡೆ ಹಾಗೂ ಎನ್.ಸಿ. ಗಾಂವ್ಕರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್ ಭಟ್ಟ, ಪ.ಪಂ ಮಾಜಿ ಅಧ್ಯಕ್ಷ ಶಿರೀಷ ಪ್ರಭು, ಕುಪ್ಪಯ್ಯ ಪೂಜಾರಿ ಇನ್ನಿತರರು ಇದ್ದರು.