ಭುವನಗಿರಿಯಲ್ಲಿ“ನಮೋ ಭುವನೇಶ್ವರಿ" ಕವಿ ಗೋಷ್ಠಿ ಕಾರ್ಯಕ್ರಮ
ಕುಮಟಾ: ನೂತನವಾಗಿ ಅಸ್ಥಿತ್ವಕ್ಕೆ ಬಂದ ಕುಮಟಾ ಕನ್ನಡ ಸಂಘವು
ಕನ್ನಡಾಂಬೆಯ ಏಕಮೇವ ದೇವಾಲಯವಿರುವ ಸಿದ್ದಾಪುರ ತಾಲೂಕಿನ ಭುವನಗಿರಿಯ ಪುಣ್ಯ ನೆಲದಲ್ಲಿ ಫೆ.27 ರಂದು ರವಿವಾರ “ನಮೋ ಭುವನೇಶ್ವರಿ” ಕಾರ್ಯಕ್ರಮ
ನಡೆಸಲಿದೆ ಎಂದು ಸಂಘದ ಸಂಸ್ಥಾಪಕ ಕಾರ್ಯಾಧ್ಯಕ್ಷ ಸದಾನಂದ ದೇಶಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನಮೋ ಭುವನೇಶ್ವರಿ”ಎಂಬ ಶೀರ್ಷಿಕೆಯಲ್ಲಿ ವಿನೂತನವಾಗಿ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು, ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಆಯೋಜಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ 12 ತಾಲೂಕುಗಳ ಕವಿಗಳು ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಆಸಕ್ತ ಕವಿಗಳು ಫೆ.20 ರೊಳಗಾಗಿ ತಮ್ಮ ಹೆಸರನ್ನು ದೂರವಾಣಿ ಸಂಖ್ಯೆ- 9448321920 ರಲ್ಲಿ ನೊಂದಾಯಿಸಿ ಕೊಳ್ಳಬಹುದಾಗಿದೆ. ಕಾರ್ಯಕ್ರಮವು ಫೆ. 27ರಂದು ರವಿವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು,. ಕನ್ನಡಾಭಿಮಾನಿಗಳು ಬಹುಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಅವರು ವಿನಂತಿಸಿರುತ್ತಾರೆ.