ಯಲ್ಲಾಪುರ ; ಪಟ್ಟಣದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ವತಿಯಿಂದ ವಾರ್ಡ್ ವಾರು ಸ್ವಚ್ಛತಾ ಕೆಲಸ ಮಾಡಲಾಗುತ್ತಿದೆ ಪ್ರಪಂ ಆರೋಗ್ಯ ನಿರೀಕ್ಷಕರು ಗುರು ಗಡಗಿ ತಿಳಿಸಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ವಿಪರೀತ ವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿಕೆ ನೀಡಿದರು. ಒಂದು ಮಳೆಯಾದರೆ ನಿಂತ ನೀರಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗುವುದರಿಂದ ಆ ಸಮಯದಲ್ಲಿ ಸೊಳ್ಳೆ ನಿವಾರಕ ಕ್ರಿಮನಾಶಕ ಸಿಂಪಡಣೆ ಹಾಗೂ ಫಾಗಿಂಗ್ ಮಾಡಲಾಗುವುದು, ಮುಂದಿನ ವಾರದಿಂದ ಪಟ್ಟಣದಲ್ಲಿ ಕ್ರಿಮನಾಶಕ ಔಷಧಿ ಸಿಂಪಡಿಸಲಾಗುವುದು. ಸಾರ್ವಜನಿಕರು ಕಸವನ್ನು ತಮ್ಮ ಮನೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಎಸೆಯದೇ ಕಸದ ವಾಹನಕ್ಕೆ ನೀಡಬೇಕು, ಯಲ್ಲಾಪುರ ಪಟ್ಟಣವನ್ನು ಸೊಳ್ಳೆ ಮುಕ್ತ ಸ್ವಚ್ಛ ಸುಂದರ ಪಟ್ಟಣವನ್ನಾಗಿಸಲು ಜನತೆ ಸಹಕರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ದಕ್ಷಿಣ ಕನ್ನಡಕ್ಕೆ ವರ್ಗಾವಣೆ
ಯಲ್ಲಾಪುರ/ ಕಾರವಾರ: ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್ ಕೆ (ಕೆ.ಎ.ಎಸ್) ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ ಎಂದು ಸರಕಾರ ಆದೇಶ ಹೊರಡಿಸಿದೆ.
ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿಯವರ ವರ್ಗಾವಣೆ ಸಾರ್ವಜನಿಕರಲ್ಲಿ ಅಸಮಾದಾನಕ್ಕೆ ಕಾರಣವಾಗಿದೆ.