ಮಹಿಳಾ ಚಾಲಕಿ ಮಣಿ ವಡ್ಡರಗೆ ಬ್ಲಾಕ್ ಕಾಂಗ್ರೆಸ್ ನಿಂದ ಸನ್ಮಾನ
ಯಲ್ಲಾಪುರ : ಹಳಿಯಾಳದ ದೇಶಪಾಂಡೆ ರೂಡಸೆಟ್ ನಲ್ಲಿ ಮಹಿಳೆಯಾಗಿ ನಾಲ್ಕು ಚಕ್ರ ವಾಹನದ ಚಾಲನೆಯ ಯಶಸ್ವಿ ತರಬೇತಿ ಪಡೆದ ಮಣಿ ನಿಂಗಪ್ಪ ವಡ್ಡರ್ ಇವರಿಗೆ ಅಭಿನಂದನಾ ಸಭೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ನಿಂದ ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೆಪಿಸಿಸಿ ಸದಸ್ಯ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಗಳಾದ ಪ್ರಶಾಂತ ದೇಶಪಾಂಡೆಯವರು ಮಣಿ ನಿಂಗಪ್ಪ ವಡ್ಡರ್ ಇವರಿಗೆ ಸನ್ಮಾನಿಸಿ ಗೌರವಿಸಿದರು. ಉಮ್ಮಚಗಿ ಗ್ರಾಮ ಪಂಚಾಯತ್ ಕಚೇರಿಯ ವಾಹನಕ್ಕೆ ಮಣಿ ವಡ್ಡರ್ ಚಾಲಕಿಯಾಗಿ ಆಯ್ಕೆಯಾಗಿದ್ದಾರೆ.
ಸನ್ಮಾನಿಸಿ ಮಾತನಾಡಿದ ಪ್ರಶಾಂತ ದೇಶಪಾಂಡೆ, ಕಾಂಗ್ರೆಸ್ ಪಕ್ಷ ಮಹಿಳೆಯರು ಗೌರವಯುತವಾಗಿ ಎಲ್ಲ ರಂಗದಲ್ಲಿಯೂ ಮುಂದೆ ಬರುವುದನ್ನು ಪ್ರೋತ್ಸಾಹಿಸುತ್ತದೆ. ಓರ್ವ ಮಹಿಳೆಯಾಗಿ ನಾಲ್ಕು ಚಕ್ರದ ವಾಹನ ಚಲಾಯಿಸುವ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮಣಿ ವಡ್ಡರ್ ಬಹಳಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಪುರುಷರಂತೆ ಮಹಿಳೆಯರೂ ಕೂಡ ಇನ್ನು ಕಾಲಿಡದ ಹಲವಾರು ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ ಎಸ್ ಭಟ್ಟ, ಪಕ್ಷದ ಪ್ರಮುಖರಾದ ದಿಲೀಪ್ ರೋಕಡೆ, ನರಸಿಂಹ ನಾಯ್ಕ, ಅಶೋಕ ಶೆಟ್, ಎನ್ ಎನ್ ಹೆಬ್ಬಾರ್, ವಿ ಜಿ ಭಾಗ್ವತ್ , ಪ್ರಧಾನ ಕಾರ್ಯದರ್ಶಿ ಅನಿಲ್ ಮರಾಟೆ, ಬಕೀಲರಾದ ಬಿ.ಬಿ ಅಮೀನಾ, ಬಸವರಾಜ ಕಳಸೂರುಕರ ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.