ಯಲ್ಲಾಪುರ : ಶುಕ್ರವಾರ ತಾಲೂಕಿನಲ್ಲಿ 7 ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 42 ಸೋಂಕಿತರು ತಾಲ್ಲೂಕಿನಲ್ಲಿದ್ದಾರೆ. 18 ಜನ ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.
ಚವತ್ತಿ 1, ನಂದೊಳ್ಳಿ-ಯಲ್ಲಾಪುರ 2, ವಜ್ರಳ್ಳಿ 0, ದೆಹಳ್ಳಿ 2, ಕಿರವತ್ತಿ 0, ಕುಂದರಗಿ 1, ಮಂಚಿಕೇರಿ 1, ವಜ್ರಳ್ಳಿ 1, ಮಲವಳ್ಳಿ 0, ಕಳಚೆ 0 ಪಿಎಚ್.ಸಿ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಇಲ್ಲಿಯವರೆಗೂ ಒಟ್ಟು 5235 ಕೊವಿಡ್ ಪಾಸಿಟಿವ್ ಬಂದಿದೆ. 5151 ಜನ ಗುಣಮುಖರಾಗಿದ್ದಾರೆ. ಇದುವರೆಗೂ 42 ಜನ ಮೃತಪಟ್ಟಿದ್ದಾರೆ. ಇಂದು 303 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಹಿಂದಿನ ಪರೀಕ್ಷೆಯೂ ಸೇರಿದಂತೆ 79 ಜನರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. 681 ಜನರ ಪರೀಕ್ಷಾ ಫಲಿತಾಂಶ ಬರುವುದು ಬಾಕಿಯಿದೆ, ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಲಸಿಕೆ : ಶುಕ್ರವಾರ ಸಂಜೆವರೆಗೆ ಮೊದಲ ಡೋಸ್ 54607, ಎರಡನೇ ಡೋಸ್ 51126 ಒಟ್ಟು ಇಂದಿನವರೆಗೂ ಒಟ್ಟು 105733 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.